ಬಂಟ್ವಾಳ: ಧರ್ಮಸ್ಥಳ ಗ್ರಾ ಯೋ ಬಿ.ಸಿ. ಟ್ರಸ್ಟ್ ಗೆ ವರ್ಲ್ಡ್ ಬ್ಯಾಂಕ್ ಹಾಗೂ ಗೇಟ್ಸ್ ಫೌಂಟೇಷನ್ ಅಧಿಕಾರಿಗಳ ಅಧ್ಯಯನ ತಂಡ ಭೇಟಿ.

Coastal Bulletin
ಬಂಟ್ವಾಳ: ಧರ್ಮಸ್ಥಳ ಗ್ರಾ ಯೋ ಬಿ.ಸಿ. ಟ್ರಸ್ಟ್ ಗೆ ವರ್ಲ್ಡ್ ಬ್ಯಾಂಕ್ ಹಾಗೂ ಗೇಟ್ಸ್ ಫೌಂಟೇಷನ್ ಅಧಿಕಾರಿಗಳ ಅಧ್ಯಯನ ತಂಡ ಭೇಟಿ.

ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರಿ. ಬಂಟ್ವಾಳ ಯೋಜನಾ ವ್ಯಾಪ್ತಿಯಲ್ಲಿ ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸ್ವಸಹಾಯ ಸಂಘಗಳ ಮುಖಾಂತರ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳ ಹಾಗೂ ಸಿಡ್ನಿ, ಸಾಲ ಪಡಕೊಂಡು ಸ್ವ ಉದ್ಯೋಗ ಮಾಡಿಕೊಂಡಿರುವ ಸದಸ್ಯರ ಅಧ್ಯಯನ ಮಾಡಲು ವರ್ಲ್ಡ್ ಬ್ಯಾಂಕ್ ನ ಶ್ರೀ ಅಮಿತ್ ಅರೋರ ಜಿ, ಗೇಟ್ಸ್ ಫೌಂಡೇಷನ್ ನ ಶ್ರೀ ಅಂಜಿನಿ ಕುಮಾರ್ ಜಿ, ಮತ್ತು ಸಾಧನ್ ನ ಶ್ರೀ ನೀರಜ್ ಪೋಕ್ರಿಯಲ್ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿನ ಕನ್ನಡ-1 ಜಿಲ್ಲಾ ನಿರದೇಶಕರಾದ ಶ್ರೀ ಮಹಾಬಲ ಕುಲಾಲ್, ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಜಯಾನಂದ ಪಿ, ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿಗಳಾದ ಪ್ರಾಮನಾಥ್.ಹೆಚ್, ಕರಾವಳಿ ಪ್ರಾದೇಶಿಕ ವಿಭಾಗದ ಬಿ.ಸಿ. ಯೋಜನಾಧಿಕಾರಿಗಳಾದ ಶ್ರೀ ಸುಪ್ರೀತ್ ಕುಮಾರ್ ಜೈನ್. ಸಂವಹಣಾ ಯೋಜನಾಧಿಕಾರಿ ಶ್ರೀ

ಅಜಿತ್ ಹೆಗ್ಡೆ ವಲಯ ಮೇಲ್ವಿಚಾರಕರಾದ ಶ್ರೀ ಮತಿ ವೇದಾವತಿ, ಸೇವಾಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದು ಮಾಹಿತಿ ನೀಡಿದರು. ಗುಂಪಿನ ಹಾಗೂ ಸದಸ್ಯರ ಧಾಖಲಾತಿಗಳ ನಿರ್ವಹಣೆ, ಸಂಘದ ಆರ್ಥಿಕ ವ್ಯವಹಾರ ಹಾಗೂ ಆರ್ಥಿಕ ವ್ಯವಹಾರದಲ್ಲಿನ ಬದ್ಧತೆ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Comment