ನಾವೂರ : ಸರಕಾರಿ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ.

Coastal Bulletin
ನಾವೂರ : ಸರಕಾರಿ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ.

ಬಂಟ್ವಾಳ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರ ಇಲ್ಲಿಗೆ ಬಂಟ್ವಾಳ ಶಾಸಕರ ವಿಶೇಷ ಮುತುವರ್ಜಿ ಮೇರೆಗೆ ಎಂ ಅರ್ ಪಿ ಎಲ್ ಸಂಸ್ಥೆಯ ಸಿ. ಎಸ್ ಅರ್ ನಿಧಿಯ ಮೂಲಕ 25ಲಕ್ಷ ರೂ ಅನುದಾನದಿಂದ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕಟ್ಟಡಕ್ಕೆ ಬಂಟ್ಟಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿದರು.

ಈ ಸಂಧರ್ಭದಲ್ಲಿ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಕಣಪಾದೆ, ಸದಸ್ಯರಾದ ವಿಜಯ ನಾವೂರು,ಜನಾರ್ದನ ಕೊಂಬೆಟ್ಟು, ತ್ರಿವೇಣಿ, ಮಾಜಿ ಸದ್ಯಸ ಸದಾನಂದ ಹಳೆಗೇಟು,ಹಾಗೂ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸತೀಶ್ ಮಲೆಕೋಡಿ ಪದವು,ಹಾಗೂ ಸದಸ್ಯರು, ಹಿರಿಯ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಪ್ರೆಸಿಲ್ಲಾ ಡಿಸೋಜ, ಪ್ರೌಢ ಶಾಲೆಯ

ಮುಖ್ಯೋಪಾಧ್ಯಾಯಿನಿ ಅರ್ಚನಾ ಸಿ.ಪಿ.,ಹಾಗೂ ಸಹಶಿಕ್ಷಕರು, ಮಾಯಾ ಕಂಟ್ರಕ್ಷನ್ ಮಾಲಕ ಕಾರ್ತಿಕ್ ಶೆಟ್ಟಿ ವಿಟ್ಲ,ಮಾತೃಭೂಮಿ ಸೇವಾ ಸಂಘ ನಾವೂರು ಇದರ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಎಕ್ಕುಡೇಲು ನಿರ್ದೇಶಕ ಸುರೇಶ್. ಎಸ್‌.ನಾವೂರು ಸಂಘಟಕರಾದ ಹರೀಶ್ ಕೆಲ್ಲೆರ್ ಮಾರ್ ಅಕ್ಷಯ್ ಮೈಂದಾಳ ಸಾಮಾಜಿಕ ಮುಂದಾಳು ಜೋಸೆಫ್ ವಿ.ಡಿ‌.ಪಾಂಗೋಡಿ ಉಪಸ್ಥಿತರಿದ್ದರು.

Leave a Comment