ಡಾನ್ಸ್ ಮಮ್ಮಿ ಡಾನ್ಸ್ ಸೀಸನ್ 7ರ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಪಡೆದ ಶ್ವೇತ ಕರ್ಕೇರಾ.

Coastal Bulletin
ಡಾನ್ಸ್ ಮಮ್ಮಿ ಡಾನ್ಸ್ ಸೀಸನ್ 7ರ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಪಡೆದ ಶ್ವೇತ ಕರ್ಕೇರಾ.

ಮಂಗಳೂರಿನ ಪ್ರತಿಷ್ಠಿತ ನಮ್ಮ ಟಿವಿ ವಾಹಿನಿಯ ಡಾನ್ಸ್ ಮಮ್ಮಿ ಡಾನ್ಸ್ ಸೀಸನ್ 7 ರ ಸ್ಪರ್ಧೆಯ ಮಂಗಳೂರು ಪುರಭವನದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಬಿ.ಸಿ.ರೋಡ್ ನ ಮಹಾಬಲ ದಾಸಕೋಡಿ ಇವರ ಪುತ್ರಿ ಶ್ವೇತ ಕರ್ಕೇರಾರವರು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಶ್ವೇತ ಕರ್ಕೇರಾ ಇವರು ಅಡಿಷನ್ ನಲ್ಲಿ ಸೆಲೆಕ್ಟ್ ಆಗಿ ಮೊದಲ ಸುತ್ತಿನಲ್ಲಿ ವಿಭಿನ್ನ ಪ್ರಕಾರದ ಡಾನ್ಸ್ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಆಯ್ಕೆಯಾಗಿ ಕ್ವಾರ್ಟರ್ ಫಿನಾಲೇಯಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿ ಗೋಲ್ಡನ್ ಬಝರ್ ಪಡೆದು, ಸೆಮಿ ಫಿನಾಲೆಯಲ್ಲಿ ಕೂಡ ಬಿ.ಸಿ.ರೋಡ್ ನ ನೃತ್ಯ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡಿ, ಫೈನಲ್ ಸುತ್ತಿಗೆ ಆಯ್ಕೆಯಾದ ಏಳು ಸ್ಪರ್ಧಿಗಳಲ್ಲಿ ಎರಡನೆಯವರಾಗಿ ಆಯ್ಕೆಯಾಗಿರುವ ಇವರು

ಪ್ರತಿ ಸುತ್ತಿನಲ್ಲೂ ವಿಭಿನ್ನ ಶೈಲಿಯ ನೃತ್ಯ ಪ್ರಕಾರಗಳ ಪ್ರದರ್ಶನ ನೀಡಿದ್ದು, 2024 ಆಗಸ್ಟ್ ತಿಂಗಳ 10ರಂದು ಶನಿವಾರ ನಡೆದ ಫಿನಾಲೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಹಾಗೂ ನಗದು ಬಹುಮಾನ ಪಡೆದು ವಿಜಯಿಶಾಲಿಯಾಗಿದ್ದಾರೆ. 

ಇವರು ಬಿ.ಸಿ ರೋಡಿನ ಖ್ಯಾತ ಡಾನ್ಸ್ ಕೊರಿಯೋಗ್ರಾಫರ್ ವಿನೋದ್ ರಾಜ್ ಹಾಗೂ ಉಡುಪಿಯ ರೋಷನ್ ಆಚಾರ್ಯ ಇವರಿಂದ ನೃತ್ಯ ತರಬೇತಿಯನ್ನು ಪಡೆದಿರುತ್ತಾರೆ.

Leave a Comment