ಬಂಟ್ವಾಳ ಪಿಡಬ್ಲ್ಯೂಡಿ. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

Coastal Bulletin
ಬಂಟ್ವಾಳ ಪಿಡಬ್ಲ್ಯೂಡಿ. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

ಬಂಟ್ವಾಳ: ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರರ ಸಂಘ ಬಂಟ್ವಾಳ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಸಹಿತ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯ ಸಭಾಂಗಣದಲ್ಲಿ ನಡೆಯಿತು.

ಬಂಟ್ವಾಳ ಶಾಸಕರಾದ ರಾಜೇಶ್ ನ್ಯಾಕ್‌ ಉಳಿಪ್ಪಾಡಿಗುತ್ತು ಅವರು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ,

ಬಂಟ್ವಾಳ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ ಕೆ . ನಾಯಕ್, ಬಂಟ್ವಾಳ ಲೋಕೋಪಯೋಗಿ ಇಲಾಖೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜೈಪ್ರಕಾಶ್ ಸಿ., ಬಂಟ್ವಾಳತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಜಿ.ಪಂ. ಕಿರಿಯ ಇಂಜಿನಿಯರ್ ಕೃಷ್ಣ ಮಾನಪ್ಪ ಜಗದೀಶ್ ನಿಂಬಾಲ್ಕರ್,

ನಾಗೇಶ್, ಸಹಾಯಕ ಇಂಜಿನಿಯರ್ ದಿಗಂಬರ ಗಾಂಪ್ಟರ್, ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ ಕಾರ್ಯದರ್ಶಿ ಕೆ. ಕೆ. ನಾಸಿರ್ ಕೊಣಾಜೆ ಅತಿಥಿಗಳಾಗಿ ಭಾಗವಹಿಸಿದ್ದರು,

ಇದೇ ವೇಳೆನಾಲ್ವರು ಹಿರಿಯ ಸದಸ್ಯರಾದ ಅಮ್ಮು ರೈ ಹರ್ಕಾಡಿ, ಕ್ಷೇವಿಯರ್ ಎಚ್ ಸಿಕ್ಕೇರ,ಎ. ಅಬ್ದುಲ್ ಖಾದರ್, ಇಬ್ರಾಹಿಂ ಮಂಚಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಕಾರ್ಯದರ್ಶಿ ಸಮೀರ್ ಪ್ರಸ್ತಾವನೆಗೈದರು. ಪಜೀರು ನೂತನ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಕಾರ್ಯದರ್ಶಿ ಕರುಣಾಕರ ಪಿ.ಪದಾಧಿಕಾರಿಗಳು ಮತ್ತು ಸದಸ್ಯರು ವೇದಿಕೆಯಲ್ಲಿದ್ದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಬಾಲಕೃಷ್ಣ ಸೇರ್ಕಳ ವಂದಿಸಿದರು.

Leave a Comment