ಬಂಟ್ವಾಳ :ತುಂಬೆ ಕನ್ನಡ ಹಾಗೂ ಆಂಗ್ಲ ಪ್ರೌಢಶಾಲೆಯಲ್ಲಿ 2024-25 ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವು ಜು 08ರಂದು ಬಿ. ಅಹ್ಮದ್ ಹಾಜಿ ಸಭಾ0ಗಣದಲ್ಲಿ ನಡೆಯಿತು.
ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗುವುದು ಶಾಲೆಯಿಂದ, ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶವೆಂದರೆ ಮಕ್ಕಳು ಸಂಸತ್ತಿನ ಕೆಲಸವನ್ನು ಅರ್ಥೈಸಿಕೊಂಡು ಮುಂದಿನ ಯುವ ಪೀಳಿಗೆಯಾಗಿ ಬೆಳೆಯಬೇಕು. ನಾಯಕನಾದವನು ಎಲ್ಲರ ಪ್ರೀತಿಯನ್ನು ಗಳಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಂಸತ್ತಿನ ಮುಖ್ಯ ನಿರ್ದೇಶಕ ವೀರಪ್ಪ ಗೌಡ ಪಿ. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ
ಮಲ್ಲಿಕಾ ಎಸ್ ಶೆಟ್ಟಿಯವರು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಆಶೀರ್ವದಿಸಿದರು. ಸಂಸತ್ತಿನ ಇನ್ನೊರ್ವ ನಿರ್ದೇಶಕರಾದ ವಿಮಲಾ ಎನ್. ಮಕ್ಕಳಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಿ ತರಬೇತು ನೀಡಿದರು.
ಉದ್ಘಾಟನಾ ಸಮಾರಂಭದ ಕಾರ್ಯಕ್ರಮದ ನಿರ್ವಹಣೆಯನ್ನು ಯಶ್ವಿನಿ 10ನೇ ತರಗತಿ ನಿರ್ವಹಿಸಿದರು. ರಜ್ವಾನ 10ನೇ ತರಗತಿ ಸ್ವಾಗತಿಸಿ, ಝೈನಾಬ ಅಫ್ರಾ 10 ನೇ ತರಗತಿ ವಂದಿಸಿದರು.









