ಬಂಟ್ವಾಳ; ಇಲ್ಲಿನ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಎಂಬಲ್ಲಿ ಕಳೆದ ವರ್ಷ ಪುನರ್ ನಿರ್ಮಾಣಗೊಂಡ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇದೇ 13ರಿಂದ 14ರ ತನಕ 'ಸಿರಿ ಜಾತ್ರೆ' ನಡೆಯಲಿದೆ. ತುಳುನಾಡಿನ ಸಂಪ್ರದಾಯದಂತೆ ಇಲ್ಲಿನ ಕುಮಾರ, ಸಿರಿ, ಅಬ್ಬಗ-ದಾರಗ, ಆದಿ ಆಲಡೆ ಸನ್ನಿಧಿ ಹೊಂದಿರುವ ಹಿನ್ನೆಲೆಯಲ್ಲಿ 'ಸಿರಿ ಜಾತ್ರೆ' ನಡೆಯುತ್ತಿದೆ.
ತಂತ್ರಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ, ನಡ್ವಂತಾಡಿ ವೇದವ್ಯಾಸ ಪಾಂಗಣ್ಣಾಯ, ಪ್ರಧಾನ ಅರ್ಚಕ ಗೋಪಾಲಕೃಷ್ಣ ಆಚಾರ್ಯ ಸನಂಗುಳಿ ಇವರು ವಿವಿಧ ವೈದಿಕ ಮತ್ತು ಧಾರ್ಮಿಕ ವಿಧಿ ವಿಧಾನ ನೆರವೇರಿಸಲಿದ್ದು, ಇದೇ 13ರಂದು ಸಂಜೆ 7 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಪ್ರದರ್ಶನ ಹಾಗೂ ಸಂಜೆ ಗಂಟೆ 7.30ಕ್ಕೆ ಭಜನಾ ಸಂಕೀರ್ತನೆ ನಡೆಯಲಿದೆ.
ಇದೇ 14ರಂದು ಬೆಳಿಗ್ಗೆ ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತ ತನಕ ಭಜನಾ ಸಂಕೀರ್ತನೆ, ಬೆಳಿಗ್ಗೆ 11 ಗಂಟೆಗೆ ಆಶ್ಲೇಷಾ ಬಲಿ, ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ
ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7.30ಕ್ಕೆ ರಂಗಪೂಜೆ, 8 ಗಂಟೆಗೆ ಧಾರ್ಮಿಕ ಸಭೆ ಬಳಿಕ ಅನ್ನಸಂತರ್ಪಣೆ, 8.30 ಗಂಟೆಗೆ ಬ್ರಹ್ಮದರ್ಶನ, ಬ್ರಹ್ಮ-ಕುಮಾರ ಭೇಟಿ, 9 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, 10 ಗಂಟೆಗೆ ಸಿರಿ, ಕುಮಾರ, ಅಬ್ಬಗ-ದಾರಗ ದರ್ಶನ, 10.30 ಗಂಟೆಗೆ ಬೈಲಾಂಡಿ ಪಂಜುರ್ಲಿ ಗಗ್ಗರ ಸೇವೆ, ಮಹಮ್ಮಾಯಿ ದರ್ಶನ, ರಾತ್ರಿ 12.30 ಗಂಟೆಗೆ ಕುಮಾರ-ಬೈಲಾಮಡಿ ಪಂಜುರ್ಲಿ, ಮಹಮ್ಮಾಯಿ ಭೇಟಿ ಕಾರ್ಯಕ್ರಮ ನೆರವೇರಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ ತಿಳಿಸಿದ್ದಾರೆ.
--









