ಬಂಟ್ವಾಳ :ಜೆಸಿಐ ಮಡಂತ್ಯಾರು ಇದರ ನೇತೃತ್ವದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಮಣಿನಾಲ್ಕೂರು ಸಹಯೋಗದಲ್ಲಿ, ಅಲ್ಲಿನ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಫೆ 10ನೇ ಮಂಗಳವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ ಜೆಸಿಐ ಮಡಂತ್ಯಾರಿನ ಅಧ್ಯಕ್ಷೆ ಸಾಯಿಸುಮಾ ಎಂ. ನಾವಡ ದ್ವಿತೀಯ ಪಿಯುಸಿ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿಯನ್ನು ನಡೆಸಿಕೊಟ್ಟರು.
ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ ಶಾಲಿನಿ ಮೆಹಂದಳೆ ಸ್ವಾಗತಿಸಿದರು. ವಿದ್ಯಾರ್ಥಿ ಲಿಖಿತ್ ಜೇಸಿವಾಣಿ ವಾಚಿಸಿದರು.ಕಾರ್ಯಕ್ರಮ ಸಂಯೋಜಕರಾದ ಲೇಡಿ ಜೇಸಿ ಸಂಯೋಜಕಿ ಜೇಸಿ ಭವ್ಯ ಟಿ. ಪೈ ಧನ್ಯವಾದ ಸಮರ್ಪಿಸಿದರು.














