ಬಂಟ್ವಾಳ :ನಗರದ ಕೆನರಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆಯು ಕೊಡ್ಮಣ್ಣುವಿನ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿತು. 'ಯೂತ್ ಫಾರ್ ಮೈ ಭಾರತ್ - ಯೂತ್ ಫಾರ್ ಡಿಜಿಟಲ್ ಲಿಟರಸಿ' ಮತ್ತು 'ಪ್ಲಾಸ್ಟಿಕ್ ಏಕ ಬಳಕೆಯ ಒಂಭತ್ತು ಕಾರಣಗಳು' ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿತ್ತು.
ಸಿಎ ಎಂ. ವಾಮನ ಕಾಮತ್ ಕೋಶಾಧಿಕಾರಿ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಮಂಗಳೂರು ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ರಾ. ಸೇ. ಯೋ ಶಿಬಿರದ ಮಹತ್ವ ಹಾಗೂ ಯುವಜನತೆ ಸಾಮಾಜಿಕ ಸೇವೆಯಲ್ಲಿ ನೀಡಬಹುದಾದ ಕೊಡುಗೆ ಕುರಿತು ಮಾರ್ಗದರ್ಶನ ನೀಡಿದರು.ಸ್ವಯಂ ಸೇವಕರಿಗೆ ಸ್ಫೂರ್ತಿದಾಯಕ ಸಂದೇಶ ನೀಡಿ, ಸಾಮಾಜಿಕ ಸೇವೆ ಮತ್ತು ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ.ಧ್ವಜಾ ರೋಹಣಗೈದರು.
ಕೆ ಆರ್ ದೇವದಾಸ್, ಮುಖ್ಯಸ್ಥರು ಶ್ರೀ ರಾಮ ಪ್ರೌಢ ಶಾಲೆ, ಅರ್ಕುಳ ಪರಂಗಿಪೇಟೆ ಮುಖ್ಯ ಅತಿಥಿ ಯಾಗಿ ಮಾತನಾಡಿ, ರಾ. ಸೇ ಯೋ. ಶಿಬಿರಗಳು ಯುವಜನತೆಯನ್ನು ಸಮಾಜಮುಖಿ ಸೇವೆಗೆ ಪ್ರೇರೇಪಿಸುವ ಅತ್ಯುತ್ತಮ ವೇದಿಕೆಯಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಶಿಸ್ತು, ನಾಯಕತ್ವ, ಮತ್ತು ಪರಿಸರ ಸಂರಕ್ಷಣೆ ಹಾಗೂ ಸಮಾಜ ಸೇವೆಯ ಮಹತ್ವವನ್ನು ಅರಿಯಬೇಕು ಎಂದು ಅವರು ಹೇಳಿದರು.
ಜಯಶ್ರೀ
ಕರ್ಕೇರ ಮೇರ ಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷರು, ಭಾಸ್ಕರ ರಾವ್ ಟಿ, ಮುಖ್ಯ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೊಡ್ಮಣ್ಣು, ಚೆನ್ನಮ್ಮ ಉಪಾಧ್ಯಕ್ಷರು ಮೇರಮಜಲು ಗ್ರಾಮ ಪಂಚಾಯತ್, ಸುಲೋಚನಾ ಕಾಂತಪ್ಪ ಶೆಟ್ಟಿ, ಪ್ರೇಮಾ ಎಂ,ಮುಖ್ಯಶಿಕ್ಷಕಿ, ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕೊಡ್ಮಣ್ಣು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವದಾಸ್ ಕಂಬಳಕೋಡಿ ಉಪಸ್ಥಿತರಿದ್ದರು.
ಬಸ್ತಿ ಪುರುಷೋತ್ತಮ ಶೆಣೈ ಕೆನರಾ ವಿಕಾಸ ಸಮೂಹ ಸಂಸ್ಥೆಯ ಸಂಯೋಜಕರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು ಶಿಬಿರದ ಉದ್ದೇಶ ಹಾಗೂ ಯುವಕರ ಪಾತ್ರದ ಬಗ್ಗೆ ಸಂದೇಶ ನೀಡಿದರು.
ರಾ. ಸೇ.ಯೋಜನಾಧಿಕಾರಿ ಕೀರ್ತನ ಎಂ ಭಟ್ ಸ್ವಾಗತಿಸಿದರು. ಸಹಾಯಕ ರಾ. ಸೇ. ಯೋ ಅಧಿಕಾರಿ ಶುಭಂ ಕುಲಾಲ್ ವಂದಿಸಿದರು. ಸ್ವಯಂಸೇವಕ ಲಿಖಿತ್ ರಾಜ್ ನಿರೂಪಿಸಿದರು. ರಾ. ಸೇ. ಯೋ ಅಧಿಕಾರಿಗಳಾದ ಸುಷಾಮ, ಲಕ್ಷ್ಮಿ ಹೆಗ್ಡೆ ಉಪಸ್ಥಿತರಿದ್ದರು.














