Coastal Bulletin

ಬಂಟ್ವಾಳ:ಫೆ. 11 ರಂದು ಬಿಸಿರೋಡಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ‌ತಾಲೂಕು ವತಿಯಿಂದ ಸರ್ಕಾರಿ ನೌಕರರಿಗೆ ಉಪಯುಕ್ತ ಕಾನೂನು ಮಾಹಿತಿ ಕಾರ್ಯಗಾರ ಮತ್ತು ವಿಶ್ರಾಂತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಖ್ಯಾತ ನ್ಯಾಯವಾದಿ,ಕರ್ನಾಟಕ ಸರಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ರಾಜೇಶ್ ಅವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲಗಳ ವ್ಯಕ್ತಿಯಾಗಿ ಭಾಗವಹಿಸಿದ ಶೈಲಜಾ ರಾಜೇಶ್ ಆವರು ಸರಕಾರಿ ನೌಕರರಿಗೆ ಉಪಯುಕ್ತ ಕಾನೂನು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.


Leave a Comment