ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಸುಜೀರು ದತ್ತನಗರ ವೀರ ಹನುಮಾನ್ ಮಂದಿರ (ರಿ)ಇದರ 24ನೇ ವಾರ್ಷಿಕೋತ್ಸವ ಜ.15ರಂದು ಗುರುವಾರ ವಿಜೃಂಭಣೆಯಿಂದ ನಡೆಯಲಿದೆ.
ಅಂದು ಬೆಳಿಗ್ಗೆ ಅರ್ಚಕರಾದ ಗಿರಿಪ್ರಕಾಶ ತಂತ್ರಿ ಪೊಳಲಿ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದ್ದು 9ಗಂಟೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
11ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಒಡಿಯೂರು ಕ್ಷೇತ್ರ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ
ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿರುವರು.
ಮಧ್ಯಾಹ್ನ 1.00ಕ್ಕೆಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಂಜೆ 6.00ರಿಂದಭಜನೆ ಪ್ರಾರಂಭ,ರಾತ್ರಿ 8.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, 9.00ರಿಂದ ಬಪ್ಪನಾಡು ಮೇಳದವರಿಂದ ಸ್ವಾಮಿ ಭಕ್ತ ಮಂಜಣ್ಣೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಮಂದಿರದ ಪ್ರ ಕಾರ್ಯದರ್ಶಿ ಗಣೇಶ್ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










