ಬಂಟ್ವಾಳ :ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಿ ಮಂಡಳಿ ಮತ್ತು ಪುದು ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ಡಿ.10ರಂದು ಪುದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಟ್ಟಡ ಕಾರ್ಮಿಕರಿಗೆ ಆರ್ ಪಿ ಎಲ್ ತರಬೇತಿ ಪ್ರಮಾಣ ಪತ್ರ ಮತ್ತು ಕಿಟ್ ವಿತರಣೆ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ ರಮ್ಲಾನ್ ಮಾರಿಪಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅಥಿತಿಯಾಗಿ ಉಮರ್ ಫಾರೂಕ್ ಫರಂಗಿಪೇಟೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ದ.ಕ ಜಿಲ್ಲೆ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರುಕ್ಸಾನ ಬಾನು ಅಮೆಮಾರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಮೃತಿ ಯು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ
ಫೆರ್ನಾಂಡಿಸ್ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಿ ಇಲಾಖೆ ಹಾಗೂ ಸಂಯೋಕರಾಗಿ ಪ್ರತೀಕ್ ಪಂಡಿತ್ , ಸುನಿಲ್‌ಕುಮಾರ್ ಸಿ.ಕೆ ಸಿಂಗ್ ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್ ಅಬ್ದುಲ್ ರಝಾಕ್ ಅಮೆಮಾರ್ , ವಿಶುಕುಮಾರ್,ಸಾರಮ್ಮ ಅಮೆಮಾರ್ ಉಪಸ್ಥಿತರಿದ್ದರು.










