ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇವರ ಜಂಟಿ ಸಹಭಾಗಿತ್ವದಲ್ಲಿ ಕಲ್ಲಡ್ಕದ ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅನ್ನದಾಸೋಹಕ್ಕೆ ಅಗತ್ಯವಿರುವಂತಹ ಸಾಮಾಗ್ರಿಗಳನ್ನು ಶಾಲಾ ಅಭಿವೃದ್ಧಿ ಸಮಿತಿಯ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ರೋ ಪಿ ಎಚ್ ಎಫ್ ಗಣೇಶ್ ಶೆಟ್ಟಿ ಗೋಲ್ತಮಜಲ್, ಜಿಎಸ್ಆರ್ ಪಿ ಹೆಚ್ ಎಫ್ ಪದ್ಮನಾಭ ರೈ, ಎಂ ಪಿ ಎಚ್ ಎಫ್ ಸತೀಶ್
ಕುಮಾರ್ ಕೆ, ರೋ ದಿವಾಕರ ಶೆಟ್ಟಿ, ರೋ ಸುಂದರ ಬಂಗೇರ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಧುಸೂಧನ್ ಶೆಣೈ, ಮುಖ್ಯೋಪಾಧ್ಯಾಯರಾದ ಅಬೂಬಕ್ಕರ್ ಅಶ್ರಫ್, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.















