ಬಂಟ್ವಾಳ :ತಾಲೂಕಿನ ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯಿಂದ ಮಾರ್ಚ್/ಏಪ್ರಿಲ್ 2024 ಎಸ್.ಎಸ್.ಎಲ್.ಸಿ. ಪರೀಕ್ಷೆಗೆ 15 ವಿದ್ಯಾರ್ಥಿಗಳು ಹಾಜರಾಗಿದ್ದು, 15 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 100% ಫಲಿತಾಂಶ ಬಂದಿರುತ್ತದೆ.
ಉತ್ತೀರ್ಣರಾದವರಲ್ಲಿ 06ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 06 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 03 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. 581 ಅಂಕ ಗಳಿಸಿದ
ಪುಣ್ಯಕೀರ್ತಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ
ಗ್ರಾಮೀಣ ಪ್ರದೇಶದಲ್ಲಿರುವ ಈ ಸರಕಾರಿ ಶಿಕ್ಷಣ ಸಂಸ್ಥೆಯು ಸತತವಾಗಿ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದೆ.









