ಮಂಗಳೂರು : ರಾಜ್ಯ ವಿಧಾನಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 75.87 ಮಂದಿ ಮತ ಚಲಾಯಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿಯಂತೆ ಅತೀ ಹೆಚ್ಚು ಮತದಾನ ಬೆಳ್ತಂಗಡಿಯಲ್ಲಿ ದಾಖಲಾಗಿದ್ದು, 80.33 ಶೇಕಡಾ ಮತ ಚಲಾವಣೆಯಾಗಿದೆ. ಉಳಿದಂತೆ ಬಂಟ್ವಾಳ 80.27 ಶೇಕಡಾ, ಪುತ್ತೂರು ಕ್ಷೇತ್ರದಲ್ಲಿ 79.91 ಶೇಕಡಾ, ಉಳ್ಳಾಲ ಕ್ಷೇತ್ರದಲ್ಲಿ 77.37 ಶೇಕಡಾ,
ಸುಳ್ಯ ಕ್ಷೇತ್ರದಲ್ಲಿ 78.53 ಶೇಕಡಾ , ಮೂಡಬಿದಿರೆ ಕ್ಷೇತ್ರದಲ್ಲಿ 76 ಶೇಕಡಾ, ಮಂಗಳೂರು ಉತ್ತರದಲ್ಲಿ 71.6 ಶೇಕಡಾ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 64.89 ಶೇಕಡಾ ಮತ ಚಲಾವಣೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 78.46 ಶೇಕಡಾ ಮತದಾನವಾಗಿದೆ.















