ಮಂಗಳೂರಿನಲ್ಲಿ ವೃದ್ಧ ಮಾವನಿಗೆ ಸೊಸೆಯಿಂದಲೇ ಗಂಭೀರ ಹಲ್ಲೆ.

Coastal Bulletin
ಮಂಗಳೂರಿನಲ್ಲಿ ವೃದ್ಧ ಮಾವನಿಗೆ ಸೊಸೆಯಿಂದಲೇ ಗಂಭೀರ ಹಲ್ಲೆ.

ಮಂಗಳೂರು: ಸೊಸೆಯೊಬ್ಬಳು ವೃದ್ದ ಮಾವನಿಗೆ ಮನಸೋ ಇಚ್ಚೆ ಥಳಿಸಿದ ಘಟನೆ ನಗರದ ಕುಲಶೇಖರ ಬಳಿ ನಡೆದಿದ್ದು ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೊಸೆಯನ್ನು ಬಂಧಿಸಲಾಗಿದೆ. ಹಲ್ಲೆಯಿಂದ 87 ವರ್ಷದ ವಯೋವೃದ್ಧರಾಗಿರುವ ಪದ್ಮನಾಭ ಸುವರ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಹಿಳೆಯನ್ನು ಕುಲಶೇಖರದ ನಿವಾಸಿ, ಕೆಇಬಿ ಅಧಿಕಾರಿ ಶ್ರೀಮತಿ ಉಮಾಶಂಕರಿ ಎಂದು ಗುರುತಿಸಲಾಗಿದೆ.

ವಿಡಿಯೋ ಲಿಂಕ್

https://youtu.be/1Zghoy2V8Dc?si=zOn63z-7cehli3nE

ಮಾ. ೯ ರಂದು ಈ ಘಟನೆ ನಡೆದಿದ್ದು, ಉಮಾ ಶಂಕರಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ

ಘಟನೆ ಬೆಳಕಿಗೆ ಬಂದಿದೆ. ವೃದ್ದ ಮಾವನಿಗೆ ವಾಕಿಂಗ್ ಸ್ಟಿಕ್‌ನಿಂದ ಹಲ್ಲೆ ನಡೆಸು ನಿಂದಿಸಿದ್ದು, ಪದ್ಮನಾಭ ಸುವರ್ಣ ಅವರ ಪುತ್ರಿ ಪ್ರಿಯಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Leave a Comment