Coastal Bulletin

ಮಂಗಳೂರು: 'ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲಿಗಳಾಗಿ ಹೋರಾಟಕ್ಕಿಳಿದ ಅಬ್ಬಕ್ಕ ರಾಣಿ ಸದಾ ಸ್ಮರಣೀಯಳು. ಆಕೆ ತುಳುನಾಡಿನ ಹೆಣ್ಮಕ್ಕಳ ಹೆಮ್ಮೆ. ಸ್ವಾತಂತ್ರ್ಯದ ಅಮೃತೋತ್ಸವ ಸಂದರ್ಭದಲ್ಲಿ ಇಂತಹ ವೀರ ರಾಣಿಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ' ಎಂದು ಮಂಗಳೂರು ಮಹಾನಗರಪಾಲಿಕೆಯ ಉಪಮೇಯರ್ ಸುಮಂಗಳ ಹೇಳಿದ್ದಾರೆ. ಮಂಗಳೂರು ಮಹಾನಗರಪಾಲಿಕೆ ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಜರಗಿದ 'ನಮ್ಮ ಅಬ್ಬಕ್ಕ - 2022: ಅಮೃತ ಸ್ವಾತಂತ್ರ್ಯ ಸಂಭ್ರಮ'ದ ಅಂಗವಾಗಿ 'ಅಮೃತ ಭಾರತ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, 'ಯುವ ಸಮುದಾಯದಲ್ಲಿ ನಾಡಿನ ಸ್ವಾತಂತ್ರ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಹಾಗೂ ರಾಷ್ಟ್ರದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರಳಾಗಿ ಚರಿತ್ರೆಯಲ್ಲಿ ದಾಖಲಾಗಬೇಕಿದ್ದ ಉಳ್ಳಾಲ ರಾಣಿ ಅಬ್ಬಕ್ಕನ ತ್ಯಾಗ ಬಲಿದಾನಗಳನ್ನು ಜನಮಾನಸಕ್ಕೆ ಮುಟ್ಟಿಸುವ ಸಲುವಾಗಿ' ನಮ್ಮ ಅಬ್ಬಕ್ಕ' ಕಾರ್ಯಕ್ರಮದೊಂದಿಗೆ ದೇಶಭಕ್ತಿ ಗೀತೆ ಹಾಗೂ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ'  ಎಂದು ತಿಳಿಸಿದರು. ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ರಾಜೇಶ್ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಲೀಲಾವತಿ ಮುಖ್ಯ ಅತಿಥಿಗಳಾಗಿದ್ದರು.

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವಾಮನ್ ಬಿ. ಮೈಂದನ್ ಸ್ವಾಗತಿಸಿದರು. ಗಾಯಕಿ ಸೌಮ್ಯಾ ಭಟ್ ಕಟೀಲು ಪ್ರಾರ್ಥಿಸಿದರು. ಗೀತಾ ಜೆ. ಸಲ್ದಾನ ವಂದಿಸಿದರು; ಸ್ಪರ್ಧಾ ಸಂಚಾಲಕ ತ್ಯಾಗಂ ಹರೇಕಳ ನಿರೂಪಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ತೋನ್ಸೆ ಪುಷ್ಕಳ್ ಕುಮಾರ್ , ಪಿ.ಡಿ. ಶೆಟ್ಟಿ , ಲಕ್ಷ್ಮೀನಾರಾಯಣ ರೈ

ಹರೇಕಳ ವಿಕ್ರಂ ದತ್ತ, ಸತೀಶ್ ಸುರತ್ಕಲ್, ತುಕಾರಾಮ ನಾಯಕ್, ಲೋಕನಾಥ್ ರೈ ಕೆ., ಲೋಹಿತ್ ಕುಮಾರ್ , ನಮಿತಾ ಶಾಮ್ ಸುವಾಸಿನಿ ಬಬ್ಬುಕಟ್ಟೆ , ಸುಮಾ ಪ್ರಸಾದ್, ವಿಜಯಲಕ್ಷ್ಮಿ ಕಟೀಲು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರು :

   ಅಮೃತ ಭಾರತ ಸಾಂಸ್ಕೃತಿಕ ಸ್ಪರ್ಧೆಯ ಅಂಗವಾಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಮತ್ತು ಸಾರ್ವಜನಿಕರಿಗೆ 'ಸ್ವಾತಂತ್ರ್ಯ ಅಮೃತೋತ್ಸವ : ರಾಣಿ ಅಬ್ಬಕ್ಕನ ನೆನಹು' ಭಾಷಣ ಸ್ಪರ್ಧೆ ಜರಗಿತು. ವಿಜೇತರ ವಿವರ -

ದೇಶಭಕ್ತಿ ಗೀತೆ : ಶ್ರೀ ದುರ್ಗಾಪರಮೇಶ್ವರಿ ಪದವಿಪೂರ್ವ ಕಾಲೇಜು ಕಟೀಲು (ಪ್ರಥಮ ರೂ.8000/-ನಗದು ಬಹುಮಾನ); ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು (ದ್ವಿತೀಯ ರೂ.5000/-); ಹೀರಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜು ಬಬ್ಬುಟ್ಟೆ ( ತೃತಿಯ ರೂ.3000/-)

 ಭಾಷಣ ಸ್ಪರ್ಧೆ : ಶ್ರೀದೇವಿ ಪುತ್ತೂರು (ಪ್ರಥಮ ರೂ. 5000/-);  ಲತೀಶ್ ವಿಟ್ಲ ( ದ್ವಿತೀಯ ರೂ.3000/-) ಹಾಗೂ ಅನ್ನಪೂರ್ಣ ಬೈಂದೂರು (ತೃತಿಯ ರೂ. 2000/-)

 ಸ್ಪರ್ಧಾ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ವಿತರಿಸಲಾಯಿತು.

Leave a Comment