ಬಂಟ್ವಾಳ: ಬಿ.ಸಿ.ರೋಡಿನ ಹಾರ್ಡ್ ವೇರ್ ಅಂಗಡಿಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಸಾಮಾಗ್ರಿ ಸೇರಿ 1.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಡಿ. 8ರ ತಡರಾತ್ರಿ ಬಿ.ಸಿ.ರೋಡು ಸರ್ವೀಸ್ ರಸ್ತೆ ಬದಿಯ ಕೃಷ್ಣಾ ಕಾಂಪ್ಲೆಕ್ಸ್ ನಲ್ಲಿರುವ ರಾಮ್ ದೇವ್ ಹಾರ್ಡ್ ವೇರ್ ಅಂಗಡಿಯಲ್ಲಿ ಕಳವು ನಡೆದಿದ್ದು ಅಂಗಡಿ ಶಟರ್ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ಡ್ರಾಯರ್ ನಲ್ಲಿದ್ದ 50 ಸಾವಿರ
ರೂ. ನಗದು ಹಾಗೂ ನೀರಿನ ಪೈಪಿನ ಸಾಮಾಗ್ರಿಗಳು, ಬಾಗಿಲಿನ ಹಿತ್ತಾಳೆ ಸಾಮಾಗ್ರಿಗಳು, ಬಾತ್ ರೂಮ್ ಸಾಮಾಗ್ರಿಗಳು ಸೇರಿ 85 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.
ಅಂಗಡಿಯ ಮ್ಯಾನೇಜರ್ ಜೀತೇಂದ್ರಕುಮಾರ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













