ಬಂಟ್ವಾಳ :ನೆತ್ತರಕೆರೆಯಲ್ಲಿ :ಡಿ 21ರಂದು ನಡೆಯುವ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಪೂರ್ವಭಾವಿಯಾಗಿ ನ.8 ಶನಿವಾರ ಸೂರ್ಯಾಸ್ತ ದಿಂದ ನ.9 ಸೂರ್ಯೋದಯದವರೆಗೆ ಅಹೋರಾತ್ರಿ ಶ್ರೀ ರಾಮ ನಾಮ ತಾರಕ ಜಪ ಪಠಣ ಕಾರ್ಯಕ್ರಮವು ಕೊಡ್ಮಾಣ್ ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯ ಸಭಾಭವನದಲ್ಲಿ ನಡೆಯಿತು.
ಸುರತ್ಕಲ್ ಗೋವಿಂದದಾಸ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪೈಕ ವೆಂಕಟರಮಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ಕೆ ಆರ್ ದೇವದಾಸ ಕೊಡ್ಮಾಣ್
, ಕೋಶಾಧಿಕಾರಿ ಕಿಶೋರ್ ಕುಮಾರ್ ನಿಸರ್ಗ ತುಂಬೆ, ಸಂಚಾಲಕ ದಾಮೋದರ ನೆತ್ತರಕೆರೆ, ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಗ, ಪದ್ಮನಾಭ ಶೆಟ್ಟಿ ಕೊಟ್ಟಿoಜ, ಸುಲೋಚನಾ ಕೆ ಶೆಟ್ಟಿ, ಲಕ್ಷ್ಮೀಕಾಂತ್ ನಾಯಕ್, ನವೀನ್ ನಾಯ್ಕ್, ಗೋಪಾಲ ಗೋವಿಂತೋಟ ಮತ್ತಿತರರು ಉಪಸ್ಥಿತರಿದ್ದರು.















