ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಸಮೀಪದ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಳ್ಳರು ಕುಕ್ಕರ್ ಸಹಿತ ದಿನಸಿ ಸಾಮಾಗ್ರಿ ಎಗರಿಸಿ ಪರಾರಿಯಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಅಂಗನವಾಡಿ ಸಹಾಯಕಿ ವಿಜಯಶ್ರೀ ಅವರು ಎಂದಿನಂತೆ ಮಂಗಳವಾರ ಸಂಜೆ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದು, ಗುರುವಾರ ಬೆಳಿಗ್ಗೆ ಹೋದಾಗ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಒಟ್ಟು ರೂ 5,500 ಮೌಲ್ಯದ ಅಲ್ಯುಮೀನಿಯಂ
ಡಬ್ಬ ಮತ್ತು ಮುಚ್ಚಳ, ಎರಡು ಕುಕ್ಕರ್, ದಿನಸಿ ಸಾಮಾಗ್ರಿ ಹಾಗೂ ರೂ 1ಸಾವಿರ ಮೊತ್ತದ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ ಎಂದು ಅಂಗನವಾಡಿ ಕಾರ್ಯಕತರ್ೆ ದೇವಕಿ ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.













