Coastal Bulletin

ಬಂಟ್ವಾಳ :ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನವೋದಯ ಗ್ರಾಮ ವಿಕಾಸ ಟ್ರಸ್ಟ್ ವತಿಯಿಂದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಚೈತನ್ಯ ವಿಮೆ ಬುಧವಾರ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಿದರು. ಇರ್ವತ್ತೂರು ಸ್ವಸಹಾಯ ಗುಂಪಿನ ಸದಸ್ಯ ದಿವಂಗತ ಆನಂದ ಇವರ ಪರವಾಗಿ ಕುಟುಂಬಿಕ ಡೀಕಯ್ಯ ಇವರಿಗೆ ರೂ 1 ಲಕ್ಷ ಮೊತ್ತದ ವಿಮಾ ಚೆಕ್ ನೀಡಲಾಯಿತು.  

ನವೋದಯ ಮೇಲ್ವಿಚಾರಕ ಸಂಜೀವ ಪೂಜಾರಿ, ಪ್ರೇರಕಿ ಲೀಲಾವತಿ, ಬ್ಯಾಂಕ್ ಪ್ರತಿನಿಧಿ ಕೇಶವ ಕಿಣಿ

ಎಚ್., ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಎಂ.ಬೂಬ ಸಪಲ್ಯ, ಸುಂದರ ನಾಯ್ಕ, ಸೀತಾರಾಮ ಶೆಟ್ಟಿ ಸೇವಾ, ಸಂತೋಷ್ ಕುಮಾರ್ ಶೆಟ್ಟಿ, ನಾರಾಯಣ ಪೂಜಾರಿ, ಹಷರ್ಿಣಿ ಪುಷ್ಪಾನಂದ, ಪಿ.ಎಂ.ಪ್ರಭಾಕರ, ಚಂದ್ರಶೇಖರ ಹೆಗ್ಡೆ, ದಿನೇಶ್ ಮೂಲ್ಯ, ಶಿವಯ್ಯ, ಸಿಬಂದಿಗಳಾದ ಬಬಿತಾ, ದೀಕ್ಷಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.


Leave a Comment