ಬಿ ಸಿ ರೋಡ್ :ಬೃಹತ್ ಹಲಸು ಹಬ್ಬ ಹಾಗೂ ಆಹಾರೋತ್ಪನ್ನಗಳ ಮಹಾಮೇಳದ ಪ್ರಚಾರ ಪತ್ರ ಬಿಡುಗೆಡೆ.

Coastal Bulletin
ಬಿ ಸಿ ರೋಡ್ :ಬೃಹತ್ ಹಲಸು ಹಬ್ಬ ಹಾಗೂ ಆಹಾರೋತ್ಪನ್ನಗಳ ಮಹಾಮೇಳದ ಪ್ರಚಾರ ಪತ್ರ ಬಿಡುಗೆಡೆ.

ಬಂಟ್ವಾಳ: ಸ್ಪರ್ಶ ಕಲಾ ಮಂದಿರದಲ್ಲಿ ಆಗಸ್ಟ್ 3,4 ರಂದು ಏರ್ಪಡಿಸಲಾದ ಬಂಟ್ವಾಳ ಬೃಹತ್ ಹಲಸು ಹಬ್ಬ-ಹಣ್ಣುಗಳ ವಿವಿಧ ಆಹಾರೋತ್ಪನ್ನಗಳ ಮಹಾಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟದ ಪ್ರಚಾರ ಪತ್ರವನ್ನು ರಾಜ್ಯ ಸಭಾ‌ ಸದಸ್ಯರಾದ ರಾಜರ್ಷಿ ಡಿ.ವಿರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನೇಶನಲ್ ಸಂಸ್ಥೆಯ ಬಂಟ್ವಾಳ ನೇತ್ರಾವತಿ ಸಂಗಮದ‌ ಅಧ್ಯಕ್ಷ ಆದಿರಾಜ ಜೈನ್ ಮೇಳದ ಬಗ್ಗೆ

ಪ್ರಸ್ತಾವನೆ ಗೈದರು.ಪದ್ಮಶೇಖರ ಜೈನ್, ಭರತ್ ಕುಮಾರ್ ಬಲ್ಲೋಡಿಗುತ್ತು, ಮಾಯಿಲಪ್ಪ ಸಾಲಿಯಾನ್,ಶ್ರೇಯಾಂಶ ಕುಮಾರ್,ಮಾಣಿಕ್ಯ ರಾಜ್ ಜೈನ್,ಶಾಂತಿ ಪ್ರಸಾದ್ ಜೈನ್,ಸತೀಶ ಕುಮಾರ್ ಪಿಲಿಂಗಾಲು,ಉಪಸ್ಥಿತರಿದ್ದರು.

Leave a Comment