ಬಂಟ್ವಾಳ: ರಾಜ್ಯ ಅಥವಾ ಕೇಂದ್ರ ಸರ್ಕಾರದ ಬೊಕ್ಕಸ ತುಂಬಲು ಗ್ಯಾರಂಟಿ ಫಲಾನುಭವಿಗಳೇ ಮುಖ್ಯ ಕಾರಣ ಎಂಬುದನ್ನು ಗ್ಯಾರಂಟಿ ಯೋಜನೆ ವಿರೋಧಿಗಳು ಅರ್ಥೈಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಇಲ್ಲಿನ ಬಿ.ಸಿ.ರೋಡು ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸಕರ್ಾರದ ಬೊಕ್ಕಸ ಖಾಲಿ ಆಗ್ತದೆ ಎಂಬ ಆರೋಪದ ನಡುವೆಯೇ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಗೊಂಡಿರುವುದಕ್ಕೆ ಈ ಸಮಾವೇಶದಲ್ಲಿ ಸೇರಿದ ಜನಸಂದಣಿಯೇ ಸಾಕ್ಷಿ.
ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಆಹಾರ ಭದ್ರತೆ ಕಾಯ್ದೆ ಮೂಲಕ ಅನ್ನಭಾಗ್ಯ ನೀಡುವ ಮಹತ್ತರ ಯೋಜನೆ ತಂದಿರುವುದೇ ಕಾಂಗ್ರೆಸ್ ಎಂದು ಅವರು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಕೆ.ಹರೀಶ ಕುಮಾರ್ ಮಾತನಾಡಿ, 'ಪಂಚ ಗ್ಯಾರಂಟಿ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ' ಎಂದರು. ವಿಧಾನಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ ಮಾತನಾಡಿ, 'ಬಡವರಿಗೆ ನೀಡುವ ಉಚಿತ ಯೋಜನೆ ಬಗ್ಗೆ ವಿರೋಧಪಕ್ಷಕ್ಕೆ ಹೊಟ್ಟೆನೋವು ಏಕೆ...?' ಎಂದು ಪ್ರಶ್ನಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಶುಭ
ಹಾರೈಸಿದರು.
ಇದೇ ವೇಳೆ ಅನ್ನಭಾಗ್ಯ ಫಲಾನುಭವಿಗಳ ಬಗ್ಗೆ ತಹಶೀಲ್ದಾರ್ ಅರ್ಚನಾ ಡಿ.ಭಟ್, ಗೃಹಲಕ್ಷ್ಮಿ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಮ್ತಾಜ್ , ಗೃಹಜ್ಯೋತಿ ಬಗ್ಗೆ ಮೆಸ್ಕಾಂ ಸಹಾಯಕ ಕಾರ್ಯನಿವರ್ಾಹಕ ಇಂಜಿನಿಯರ್ ನಾರಾಯಣ ಭಟ್, ಶಕ್ತಿ ಯೋಜನೆ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿ ಜಯಕರ ಶೆಟ್ಟಿ, ಯುವನಿಧಿ ಬಗ್ಗೆ ಜಿಲ್ಲಾ ಕೌಶಲ್ಯಾಧಿಕಾರಿ ಪ್ರದೀಪ್ ಡಿಸೋಜ ಮಾಹಿತಿ ನೀಡಿದರು.ಐವರು ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತಿ ಸಿಇಒ ಡಾ.ಆನಂದ್ ಕೆ., ಸಹಾಯಕ ಕಮಿಷನರ್ ರಾಜು, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿವರ್ಾಹಕ ಎಂಜಿನಿಯರ್ ಜಯಪ್ರಕಾಶ್ ಮತ್ತಿತರರು ಇದ್ದರು.
ತಹಶೀಲ್ದಾರ್ ಅರ್ಚನಾ ಡಿ.ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ತೋಟಗಾರಿಕಾ ಸಹಾಯಕ ನಿದರ್ೇಶಕ ಪ್ರದೀಪ್ ಡಿಸೋಜ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ರಾಜೀವ್ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.










