ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಗುರುವಾರ ನಡೆಯಿತು. ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಕೆ.ಸುಂದರ ರಾವ್ ಮತ್ತು ಅರ್ಚಕ ನಾಗೇಶ ರಾವ್ ವಿಶೇಷ ಪೂಜೆ ನೆರವೇರಿಸಿದರು.ಇದೇ ವೇಳೆ ದೇವರ ಬಲಿ, ಭಜನೆ, ಪಲ್ಲಕಿ ಉತ್ಸವ, ಸಾಮೂಹಿಕ ಆಶ್ಲೇಷ ಬಲಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಸದಸ್ಯರಾದ ರಾಜೇಶ ಗೋವಿಂದಬೆಟ್ಟು, ಶರತ್ ಕುಮಾರ್ ಕೊಯಿಲ, ಆನಂದ ಬುರಾಲು, ಲೋಕೇಶ ಕೈತ್ರೋಡಿ, ನಳಿನಿ ಬದನಡಿ, ಯಮುನಾ ಕೈತ್ರೋಡಿ, ಮಾಜಿ ಅಧ್ಯಕ್ಷ ಪ್ರಕಾಶ್ ಜೈನ್ ಬೊಲ್ಲೋಡಿ, ಪ್ರಮುಖರಾದ ಮೋಹನ್ ಕೆ.ಶ್ರೀಯಾನ್, ಬಿ.ದಯಾನಂದ ಸಪಲ್ಯ,
ದಿನೇಶ ಸುವರ್ಣ, ರಾಮಚಂದ್ರ ಶೆಟ್ಟಿಗಾರ್, ಚಂದ್ರಶೇಖರ ಆಚಾರ್ಯ ಮತ್ತಿತರರು ಇದ್ದರು.
ಭೇಟಿ:
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ ಅರಳ, ರಮಾನಾಥ ರಾಯಿ, ಪ್ರಭಾಕರ ಪ್ರಭು, ಬೇಬಿ ಕುಂದರ್ ಮತ್ತಿತರ ಗಣ್ಯರು ಭೇಟಿ ನೀಡಿದರು.














