ಸಜಿಪಮೂಡ:'ಪರಿಸರ ಜಾಗೃತಿ ಮತ್ತು ಪರಿಸರ ಸ್ನೇಹಿ ಪೇಪರ್ ಪೆನ್ ತಯಾರಿ' ಕಾರ್ಯಾಗಾರ.

Coastal Bulletin
ಸಜಿಪಮೂಡ:'ಪರಿಸರ ಜಾಗೃತಿ ಮತ್ತು ಪರಿಸರ ಸ್ನೇಹಿ ಪೇಪರ್ ಪೆನ್ ತಯಾರಿ' ಕಾರ್ಯಾಗಾರ.

ಸಜಿಪಮೂಡ: ಸರ್ಕಾರಿ ಪ್ರೌಢಶಾಲೆ ಪೇಪರ್ ಪೆನ್ ತಯಾರಿ ಕಾರ್ಯಾಗಾರ ಬಂಟ್ವಾಳ: ಇಲ್ಲಿನ ಸಜಿಪಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಇಂಟರ್ಯಾಕ್ಟ್ ಕ್ಲಬ್ ಮತ್ತು ಪರಿಸರ ಸಂಘದ ವತಿಯಿಂದ 'ಪರಿಸರ ಜಾಗೃತಿ ಮತ್ತು ಪರಿಸರ ಸ್ನೇಹಿ ಪೇಪರ್ ಪೆನ್ ತಯಾರಿ' ಕಾರ್ಯಾಗಾರ ಈಚೆಗೆ ನಡೆಯಿತು.

ಸಂಪನ್ಮೂಲ ವ್ಯಕ್ತಿ ಜಯಪ್ರಕಾಶ್ ಎಕ್ಕಾರು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, 'ಪರಿಸರ ಸ್ನೇಹಿ ಪೇಪರ್ ಪೆನ್ ಮಣ್ಣಿನಲ್ಲಿ ಕರಗುವುದರ ಜೊತೆಗೆ ಕೆಲವೊಂದು ಇದರಲ್ಲಿ ಅಳವಡಿಸಿದ ವಿವಿಧ ಜಾತಿಯ ವೃಕ್ಷಗಳ ಬೀಜವೂ ಮೊಳಕೆಯೊಡೆದು ಸಮೃದ್ಧ

ಪರಿಸರ ನಿಮರ್ಾಣಕ್ಕೆ ಸಹಕಾರಿಯಾಗುತ್ತದೆ' ಎಂದರು.

ಉಪ ಪ್ರಾಂಶುಪಾಲೆ ಆಲಿಸ್ ಪಾಯಸ್ ಶುಭ ಹಾರೈಸಿದರು. ವಿದ್ಯಾರ್ಥಿನಿ ಕೃತಿಕಾ ಸ್ವಾಗತಿಸಿ, ಜಾಹ್ನವಿ ವಂದಿಸಿದರು. ಶಿಕ್ಷಕ ಗಣೇಶ ಬಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಲೋಚನಾ ಕುಮಾರಿ ಸಹಕರಿಸಿದರು.

Leave a Comment