Coastal Bulletin

ಬಂಟ್ವಾಳ : ಬಿ.ಸಿ.ರೋಡಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 17ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪೂರ್ವಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ಭಾರತೀಯ ಜೀವವಿಮಾ ನಿಗಮ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಈ ಸಂಸ್ಥೆಯ ಪ್ರತಿನಿಧಿಗಳ ವಿವಿಧ ಬೇಡಿಕೆ ಮತ್ತು ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಸಮಘಟನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇವರಿಗೆ ಮನವಿ ಸಲ್ಲಿಸಿ ಗಮನ ಸೆಳೆಯುವ ಪ್ರಯತ್ನ ಸಂಘಟನೆ ಮಾಡುತ್ತಿದೆ ಎಂದು ಎಲ್ಲೈಸಿ ಪ್ರತಿನಿಧಿಗಳ ಸಂಘದ ರಾಜ್ಯಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.ಇಲ್ಲಿನ ಬಿ.ಸಿ.ರೋಡಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 17ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ರೋಹಿದಾಸ್ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ

ವಿಭಾಗೀಯ ಅಧ್ಯಕ್ಷ ಎ.ಎಸ್.ಲೋಕೇಶ ಶೆಟ್ಟಿ ಮಾತನಾಡಿ, ಗರಿಷ್ಟ ಮಂದಿ ಸದಸ್ಯರಾಗಿ ಸಂಘ ಬಲಿಷ್ಟಗೊಳಿಸಬೇಕು ಎಂದರು. 

ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಕೇಶವ ಪ್ರಭು, ಉಡುಪಿ ವಿಭಾಗೀಯ ಕೋಶಾಧಿಕಾರಿ ಎಂ.ರಘುನಾಥ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಭಟ್, ಸುಳ್ಯ ಶಾಖೆ ಉಪಾಧ್ಯಕ್ಷ ಶಂಕರಲಿಂಗಂ, ಮಹಿಳಾ ಘಟಕ ಅಧ್ಯಕ್ಷೆ ವಿಜಯ ಕುಮಾರಿ ಇಂದ್ರ ಶುಭ ಹಾರೈಸಿದರು.

ಇದೇ ವೇಳೆ ಸಂಘದ ಪೂರ್ವಾಧ್ಯಕ್ಷರು ಮತ್ತು ಸಾಧಕ ಪ್ರತಿನಿಧಿಗಳಿಗೆ ಸನ್ಮಾನ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂತೋಷ್ ನೆತ್ರಕೆರೆ ಇವರನ್ನು ಅಭಿನಂದಿಸಲಾಯಿತು.

ಸಂಘದ ಪೂರ್ವಾಧ್ಯಕ್ಷ ಉಮೇಶ ಬರಿಮಾರು ಸ್ವಾಗತಿಸಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಪ್ರತಿನಿಧಿ ನವೀನ್ ಕೊಡ್ಮಾಣ್ ಮತ್ತು ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು.  

Leave a Comment