Coastal Bulletin

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ನೆತ್ತರಕೆರೆ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪ್ರಾರಂಭೋತ್ಸವವು ಸೋಮವಾರ ಬೆಳಿಗ್ಗೆ ಪೋಷಕರೆಲ್ಲರ ಸಹಬಾಗಿತ್ವದಲ್ಲಿ ನಡೆಯಿತು.

ಅಂಗನವಾಡಿಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು,ದೀಪ ಬೆಳಗಿಸಿ, ಪುಟಾಣಿಗಳಿಗೆ ಮಂಗಳಾರತಿ ಮಾಡಿ ಅಕ್ಷತೆ ಹಾಕಿ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು ನಂತರ ಪುಸ್ತಕ ಮತ್ತು ಪೆನ್ಸಿಲ್ ಕೊಟ್ಟು, ಸಿಹಿ ತಿಂಡಿಯನ್ನು ಹಂಚಲಾಯಿತು.

ಈ ಸಂದರ್ಭದಲ್ಲಿ ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಾಮೋದರ್ ನೆತ್ತರಕೆರೆ,

ನವೋದಯ ಮಿತ್ರ ಕಲಾ ವೃಂದ ದ ಅಧ್ಯಕ್ಷರಾದ ಸುರೇಶ್ ಭಂಡಾರಿ ಅರ್ಬಿ, ತುಂಬೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಹರಿನಾಕ್ಷಿ ದಾಮೋದರ್, ಪುದು ಪಂಚಾಯತ್ ಸದಸ್ಯ ಸಂತೋಷ್ ನೆತ್ತರಕೆರೆ ಮುಂತಾದವರು ಇದ್ದರು

ಅಂಗನವಾಡಿ ಕೇಂದ್ರ ದ ಶಶಿಕಲಾ ಟೀಚರ್ ಸಹಕರಿಸಿದರು.

Leave a Comment