ಬಿ ಸಿ ರೋಡ್ :ಶ್ರೀ ಸಾಯಿ ಕಿಡ್ ಝೋನ್ ಅಶ್ರಯದಲ್ಲಿ "ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ"

Coastal Bulletin
ಬಿ ಸಿ ರೋಡ್ :ಶ್ರೀ ಸಾಯಿ ಕಿಡ್ ಝೋನ್ ಅಶ್ರಯದಲ್ಲಿ "ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ"

ಬಂಟ್ವಾಳ :ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಗಳಲ್ಲಿ ಪ್ರಥಮ ಬಾರಿಗೆ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಸಹಕಾರದೊಂದಿಗೆ "ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ" ಸ್ಪರ್ಶ ಕಲಾ ಮಂದಿರ ಬಿ ಸಿ ರೋಡ್ ಇಲ್ಲಿ ಜು 20 ಆದಿತ್ಯವಾರದಂದು ನಡೆಯಲಿದೆ.

ಶ್ರೀ ರಕ್ತೇಶ್ವರೀ ದೇವೀ ದೇವಸ್ಥಾನ ದ ಸೇವಾ ಸಮಿತಿ ಯ ಅಧ್ಯಕ್ಷರಾದ ವಿಶ್ವನಾಥ್ ಬಿ ಇವರು ಉದ್ಘಾಟಿಸಲಿದ್ದಾರೆ,ಮುಖ್ಯ ಅತಿಥಿಯಾಗಿ ಬಿ. ಸಂಜೀವ ಪೂಜಾರಿ ಗುರು ಕೃಪಾ ಪೆಟ್ರೋಲಿಯಂ ಬಿ. ಸಿ ರೋಡ್,ಅತಿಥಿಗಳಾಗಿ ಸುನೀಲ್ ಆಚಾರ್ಯ ಅಪೂರ್ವ ಜ್ಯುವೆಲ್ಲರ್ಸ್ ಬಿ ಸಿ ರೋಡು. ಮ್ಯಾಥ್ಯೂ ಫ್ರಾನ್ಸಿಸ್. ಡಿ ಕುನ್ಹಾ.ಮಾಜಿ ಅಧ್ಯಕ್ಷರು ರಕ್ಷಕ ಶಿಕ್ಷಕ ಸಂಘ. ಕಿಡ್ ಝೋನ್ ವಿದ್ಯಾ ಸಂಸ್ಥೆಗಳು. ಸವಿತಾ ಅರುಣ್ ಪ್ರಕಾಶ್ ,ಮಾಜಿ ಅಧ್ಯಕ್ಷೆ ರಕ್ಷಕ ಶಿಕ್ಷಕ ಸಂಘ ಕಿಡ್ ಝೋನ್ ವಿದ್ಯಾ ಸಂಸ್ಥೆಗಳು.ಅಭಿಲಾಶ್ ಭಟ್ .ಮಾಜಿ ಅಧ್ಯಕ್ಷರು ರಕ್ಷಕ ಶಿಕ್ಷಕ ಸಂಘ, ಕಿಡ್ ಝೋನ್ ವಿದ್ಯಾಸಂಸ್ಥೆ. ಜ್ಞಾನೇಶ್ ಜಿ ರಾವ್.ಮಾಜಿ

ಅಧ್ಯಕ್ಷರು ರಕ್ಷಕ ಶಿಕ್ಷಕ ಸಂಘ ಕಿಡ್ ಝೋನ್ ವಿದ್ಯಾ ಸಂಸ್ಥೆ, ತೇಜಸ್ವಿನಿ ಪೂಜಾರಿ ಅಧ್ಯಕ್ಷರು ರಕ್ಷಕ ಶಿಕ್ಷಕ ಸಂಘ ಕಿಡ್ ಝೋನ್ ವಿದ್ಯಾ ಸಂಸ್ಥೆಗಳು ಇವರು ಆಗಮಿಸಲಿದ್ದಾರೆ. 

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ವಹಿಸಲಿದ್ದು ,ಕ್ರೀಡಾಕೂಟದ ಮೇಲ್ವಿಚಾರಕರಾಗಿ ರಾಜೇಶ್ ಅಮಿನ್, ಸುಂದರ್ ಎನ್, ಜಯಶ್ರೀ ರಕ್ಷಕ ಶಿಕ್ಷಕ ಸಂಘದ ಎಲ್ಲಾ ಸದಸ್ಯರು, ಶಿಕ್ಷಕರು ಸಹಕರಿಸಲಿದ್ದಾರೆ. 

ಸಂಸ್ಥೆಯ ವಿದ್ಯಾರ್ಥಿಗಳಿಗೆ,ಪೋಷಕರಿಗೆ, ಹಳೇ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಓಟ, ಹಿಮ್ಮುಖ ಓಟ,ಹಾಳೆ ಓಟ, ಮೂರು ಕಾಲಿನ ಓಟ,ಜನ ಕಂಬಳ,ರಿಲೇ , ನಿಧಿ ಶೋಧ,ದಂಪತಿ ಓಟ, ತ್ರೋಬಾಲ್,ಮಡಕೆ ಒಡೆಯುವುದು,ಹಗ್ಗ ಜಗ್ಗಾಟ ಮುಂತಾದ ಅನೇಕ ಮನೋರಂಜನ ಆಟಗಳು ನಡೆಯಲಿದೆ ಎಂದು ಸಂಚಾಲಕರಾದ ಐತಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment