Coastal Bulletin

ಬಂಟ್ವಾಳ :ಲಯನ್ಸ್ ಕ್ಲಬ್ ಮಾಣಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಿನಾಂಕ 5 ಜುಲೈ ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನ ಮಾಣಿಯಲ್ಲಿ ಜರುಗಿತು.

ನಿಕಟಪವೂರ್ವ ಜಿಲ್ಲಾ ರಾಜ್ಯಪಾಲರು 2022-23 PMJF ಲಯನ್ ವಸಂತ ಕುಮಾರ್ ಶೆಟ್ಟಿ ಪದ ಪ್ರಧಾನ ಕಾರ್ಯಕ್ರಮ ನಡೆಸಿದರು. ಮುಖ್ಯ ಅಥಿತಿಗಳಾಗಿ ರೋ ಕಿರಣ್ ಹೆಗ್ಡೆಯವರು ಭಾಗವಹಿಸಿದರು.

ನೂತನ ಅಧ್ಯಕ್ಷರಾಗಿ ಲಯನ್ ಉಮೇಶ್ ಪಿ., ಬರಿಮಾರು,ಕಾರ್ಯದರ್ಶಿ ಲಯನ್ ರವಿಕಿರಣ್ ಶೆಟ್ಟಿ, ಪಾಂಡಿಬೆಟ್ಟುಕೋಶಾಧಿಕಾರಿ ಲಯನ್ ಕೂಸಪ್ಪ ಪೂಜಾರಿ, ಚಿನ್ನಯಕಟ್ಟೆ ಅಧಿಕಾರ ಸ್ವೀಕರಿಸಿದರು.

ಬಾಲಕೃಷ್ಣ ಆಳ್ವ ಕೊಡಾಜೆ

ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷರು ಲಯನ್ ಡಾ ಶ್ರೀನಾಥ್ ಆಳ್ವರವರು ಸ್ವಾಗತಿಸಿದರು. ರವಿಕಿರಣ್ ಶೆಟ್ಟಿ ವಂದಿಸಿದರು. 

ಈ ಸಂಧರ್ಭದಲ್ಲಿ ಕು| ಜಾನ್ಹವಿ ಸಿ. ಶೆಟ್ಟಿ ಇವರ ವಿಧ್ಯಾಭ್ಯಾಸಕ್ಕೆ ರೂ.13,000/-, ವಿಕಲಚೇತನ ಮಗು ಮಿತೇಶ್ ಕೆದಿಲ ಇವರಿಗೆ 10,000/- ಆರ್ಥಿಕ ನೆರವು ನೀಡಲಾಯಿತು. ಬುರ್ದು ಬರಿಮಾರ್ ಅಂಗನವಾಡಿ ಕೇಂದ್ರಕ್ಕೆ ಕಪಾಟು ಕ್ಲಬ್ ನ ವತಿಯಿಂದ ಹಸ್ತಾಂತರಿಸಲಾಯಿತು.

Leave a Comment