ಬಂಟ್ವಾಳ :ನವಜ್ಯೋತಿ ಯುವಕ ಮಂಡಲ ಕಾಪಿಕಾಡ್ ಕೊಡ್ಮಾನ್ - ಪುದು ಇದರ ನವಜ್ಯೋತಿ ಸಹಾಯ ಹಸ್ತ ಯೋಜನೆ-01 ರ ಫಲಾನುಭವಿಗಳಾದ ಬ್ರಹ್ಮರಕೂಟ್ಲು ದಿವಂಗತ ವಿಶ್ವನಾಥ ಮತ್ತು ಮಮತಾ ದಂಪತಿಗಳ ಸುಪುತ್ರಿಯರಾದ ಮೋಕ್ಷಿತ (10ವರ್ಷ)ಮತ್ತು ದ್ಯುತಿ(8ವರ್ಷ)ಇವರ ವಿದ್ಯಾಭ್ಯಾಸದ ನೆರವಿಗಾಗಿ ರೂ 44,000 ಧನಸಹಾಯ ಸಂಘದ ಸದಸ್ಯರ ಸಮ್ಮುಖದಲ್ಲಿ ಜೂ.08ರಂದು ಆದಿತ್ಯವಾರ ಹಸ್ತಾಂತರಿಸಲಾಯಿತು.
ಮಮತಾರವರ ಪತಿ ದಿವಂಗತ ವಿಶ್ವನಾಥ್ ಇವರು ಆರು ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದು ಕುಟುಂಬಕ್ಕೆ ಆಧಾರವಾಗಿದ್ದ ಮಮತಾರವರ ಅಣ್ಣ ಜಗದೀಶ್ ಕಾಪಿಕಾಡ್ ಕೂಡ ಇತ್ತೀಚೆಗೆ ಅನಿರೀಕ್ಷಿತವಾಗಿ ಸ್ವರ್ಗಸ್ಥರಾಗಿರುತ್ತಾರೆ.
ಇಬ್ಬರು ಸುಪುತ್ರಿಯರಾದ ಮೋಕ್ಷಿತ ಮತ್ತು ದ್ಯುತಿ ಇವರ ವಿದ್ಯಾಭ್ಯಾಸದ ನೆರವಿಗಾಗಿ ಸಂಘದ ಸದಸ್ಯರು ಮತ್ತು ಊರವರ, ದಾನಿಗಳ ಸಹಕಾರದೊಂದಿಗೆ ಆರ್ಥಿಕ ಸಹಾಯಧನವನ್ನು ಹಸ್ತಾಂತರಿಸಲಾಯಿತು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














