ಕೊಡ್ಮಾಣ್ : ಕೊಡ್ಮಾಣ್ ಗುತ್ತು ವಿವೇಕಾನಂದ ಆಳ್ವರಿಗೆ ನುಡಿನಮನ ಕಾರ್ಯಕ್ರಮ.

Coastal Bulletin
ಕೊಡ್ಮಾಣ್ : ಕೊಡ್ಮಾಣ್ ಗುತ್ತು ವಿವೇಕಾನಂದ ಆಳ್ವರಿಗೆ ನುಡಿನಮನ ಕಾರ್ಯಕ್ರಮ.

ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಮತ್ತು ಶ್ರೀ ಕೊರ್ದಬ್ಬು ದೈವಸ್ಥಾನ, ನೆಮೋತ್ಸವ ಸಮಿತಿ ವತಿಯಿಂದ ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್ ನಲ್ಲಿ ಮೇ 5ರಂದು ಆದಿತ್ಯವಾರ ಕೊಡ್ಮಾಣ್ ಗುತ್ತು ವಿವೇಕಾನಂದ ಆಳ್ವರಿಗೆ ನುಡಿನಮನ ಕಾರ್ಯಕ್ರಮ. ನಡೆಯಿತು.

ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ದೇವೀ ಪ್ರಸಾದ್ ಶೆಟ್ಟಿ ಕೊಡ್ಮಾಣ್ ನುಡಿ ನಮನ ಸಲ್ಲಿಸಿ, ವಿವೇಕಾನಂದ ಆಳ್ವರನ್ನು ಕಳೆದುಕೊಳ್ಳುವ ಮೂಲಕ ಒಂದೇ ವರ್ಷದಲ್ಲಿ ಈ ಊರಿನ ಕಣ್ಣುಗಳಂತೆ ಇದ್ದು ಇಬ್ಬರನ್ನು ಕಳೆದುಕೊಂಡು ಈ ಊರಿಗೆ ದೊಡ್ಡ ಆಘಾತವಾಗಿದೆ. ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿಯವರ ಎಲ್ಲಾ ಸಮಾಜಮುಖಿ ಕೆಲಸಗಳನ್ನು ಬೆಂಬಲಿಸಿ ಅವರ ಬೆನ್ನೆಲುಬು ಆಗಿದ್ದವರು ವಿವೇಕಾನಂದ ಆಳ್ವರು,

ಅವರಿಗೆ ಈ ಊರಿನ ಜನರ ಮೇಲೆ ಅಪಾರ ಪ್ರೀತಿ ಇತ್ತು. ವಿವೇಕಾನಂದ ಆಳ್ವರ ಶಿಸ್ತು ಸಂಯಮದ ಜೀವನ ನಮಗೆಲ್ಲರಿಗೂ ಆದರ್ಶ ಎಂದು ಹೇಳಿದರು. 

ಕೆ, ಆರ್ ದೇವದಾಸ್ ಮಾಸ್ಟರ್ ಪ್ರಾಸ್ತಾವನ ನುಡಿಯಲ್ಲಿ ವಿವೇಕಾನಂದ ಆಳ್ವ ರ ಆದರ್ಶ ಬದುಕಿನ ಸವಿಸ್ತಾರ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮಹಾಬಲ ಶೆಟ್ಟಿ ಕೊಡ್ಮಾಣ್, ಸಂಜೀವ ಕೋಟ್ಯಾನ್ ಬೆಂಜನಪದವು ಉಪಸ್ಥಿತರಿದ್ದರು. ಗೋಪಾಲ ಕುಲಾಲ್ ಗೋವಿನ ತೋಟ ಸ್ವಾಗತಿಸಿ, ವಂದಿಸಿದರು.

Leave a Comment