ಬಂಟ್ವಾಳ: ಇಲ್ಲಿನ ಒಟ್ಟು 20 ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದ್ದು, ಈ ಪೈಕಿ 7 ಸರ್ಕಾರಿ ಪ್ರೌಢಶಾಲೆ ಮತ್ತು 13 ಅನುದಾನರಹಿತ ಪ್ರೌಢಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದೆ. ಒಟ್ಟು 4,621 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 3,987 ಮಂದಿ ತೇರ್ಗಡೆಯಾಗಿದ್ದಾರೆ.
ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಗ್ಗ ಕಾವಳಪಡೂರು ಸರ್ಕಾರಿ ಪ್ರೌಢಶಾಲೆ, ಸರಪಾಡಿ, ಕೊಡ್ಮಾಣ್, ಅಜ್ಜಿಬೆಟ್ಟು, ಪಂಜಿಕಲ್ಲು, ನೈನಾಡು ಸರ್ಕಾರಿ ಪ್ರೌಢಶಾಲೆ ಶೇ 100 ಫಲಿತಾಂಶ ಸಾಧಿಸಿದೆ.
ತಾಲೂಕಿನಲ್ಲಿ ಒಟ್ಟು 2,364 ಮಂದಿ ಬಾಲಕರ ಪೈಕಿ 1907 ಮತ್ತು 2,257
ಮಂದಿ ಬಾಲಕಿಯರ ಪೈಕಿ 2080 ಮಂದಿ ತೇರ್ಗಡೆಗೊಂಡಿದ್ದಾರೆ.
ತಾಲೂಕಿಗೆ ಪ್ರಥಮ:
ಇಲ್ಲಿನ ವಿದ್ಯಾಗಿರಿ ಎಸ್ ವಿ ಎಸ್ ಪ್ರೌಢಶಾಲೆ ವಿದ್ಯಾರ್ಥಿ ಸುಧಾಂಶು ಮಹಾಕುಡ್ ಒಟ್ಟು 625ರಲ್ಲಿ 621 ಅಂಕ ಗಳಿಸುವ ಮೂಲಕ ತಾಲೂಕಿನಲ್ಲೇ ಗರಿಷ್ಟ ಶೇ 99.36% ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ.















