ಬಂಟ್ವಾಳ : ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ತರಿಕಿಟ ಕಲಾ ಕಮ್ಮಟ ಇದರ ಇಪ್ಪತ್ತು ವರ್ಷದ ಸಂಭ್ರಮಾಚರಣೆಯ ಸಲುವಾಗಿ ಆದಿತ್ಯವಾರ ಪೆರಿಯೋಡು ಬೀಡುವಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭ ಸಿನಿಮಾ ಕಲಾ ನಿರ್ದೆಶಕರ ಶಶಿಧರ ಬೆಂಗಳೂರು ಮತ್ತು ಕೆವಿಜಿ ಉಪನ್ಯಾಸಕಿ ಮೀನಾ ಸುಳ್ಯ, ಉಮಾಶಂಕರ್ ಪೆರಿಯೋಡಿ ಮತ್ತು ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜಿನ ಉಪನ್ಯಾಸಕಿ ಕವಿತಾಯಾದವ್ ಉಪಸ್ಥಿತರಿದ್ದರು.
ಜಾಜಿ, ಪೂರ್ವ, ಸ್ವರ, ದಕ್ಷ, ನೇಹ, ಅನಿರುದ್ಧ, ಅಭಿಲಾಷರವರ ಪ್ರವಾಸದ
ಅನುಭವ ಕವಲಕ್ಕಿ ಪುಸ್ತಕವನ್ನು ಬಿಡುಗಡೆ ಮತ್ತು ವಾಣಿ ಪೆರಿಯೋಡಿ ಬರೆದ ಮೊಟ್ಟೆ ಆಮ್ಲೆಟ್ ಮಾಡುವಾ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭ ಪ್ರಿಯಾಂಶು ಮತ್ತು ಮಲ್ಲಿಕಾ ಜ್ಯೋತಿಗುಡ್ಡೆರವರು ಮಕ್ಕಳಿಗೆ ಹಾಡು ಕಲಿಸಿದರು. ತ್ರಪ್ತಿ ಪೆರ್ಲಾಪು ಒರಿಗಾಮ್ ತರಬೇತಿ ನೀಡಿದರು. ಕು. ಇಂದು ಕಾರ್ಯಕ್ರಮ ನಿರೂಪಿಸಿದರು.















