ಫರಂಗಿಪೇಟೆ: ಮಾ.13, ಶ್ರೀ ಅಂಜನೇಯ ಮತ್ತು ಶ್ರೀ ಗಣಪತಿ ದೇವರಿಗೆ ದೃಢಕಲಶಾಭಿಷೇಕ.

Coastal Bulletin
ಫರಂಗಿಪೇಟೆ: ಮಾ.13, ಶ್ರೀ ಅಂಜನೇಯ ಮತ್ತು ಶ್ರೀ ಗಣಪತಿ ದೇವರಿಗೆ ದೃಢಕಲಶಾಭಿಷೇಕ.

ಬಂಟ್ವಾಳ :ಶ್ರೀ ಆಂಜನೇಯ ದೇವಸ್ಥಾನ ವಿಜಯನಗರ, ಫರಂಗಿಪೇಟೆ ಬಂಟ್ವಾಳ ತಾಲೂಕು, ಇಲ್ಲಿನ 6 ಗ್ರಾಮಗಳ ಮತ್ತು ಸಮಸ್ತ ಭಕ್ತಮಹಾಜನರ ಸಹಾಯ-ಸಹಕಾರದೊಂದಿಗೆ ಶ್ರದ್ದಾಭಕ್ತಿಯಿಂದ ವೈಭವಯುತವಾಗಿ ಬ್ರಹ್ಮಕಲಶೋತ್ಸವದೊಂದಿಗೆ ಲೋಕಾರ್ಪಣೆಗೊಂಡ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಅಂಜನೇಯ ಮತ್ತು ಶ್ರೀ ಗಣಪತಿ ದೇವರಿಗೆ ದೃಢಕಲಶಾಭಿಷೇಕವು ಮಾ.13ರಂದು ಬುಧವಾರ ನಡೆಯಲಿದೆ.

ಅ ದಿನ ಬೆಳಗ್ಗೆ ಗಂಟೆ 7.30ಕ್ಕೆ ಪ್ರಾತಃ ಪೂಜೆ,ಶ್ರೀ ಗಣಪತಿ ಹವನ, 9.30ಯಿಂದ ಕಲಶಾಭಿಷೇಕ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯ ನಂತರ ,ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6ರಿಂದ ಭಜನೆ,ಸಂಧ್ಯಾ ಪೂಜೆ

ನಡೆದು ರಾತ್ರಿ ಗಂಟೆ 8ರಿಂದ ಮಾನಸ ಕಲಾವಿದರು ಫರಂಗಿಪೇಟೆ ಇವರಿಂದ "ಬಂಗಾರ್ ಬಾಬು"ನಾಟಕ ಪ್ರದರ್ಶನವಾಗಲಿದೆ ಎಂದು ದೇವಸ್ಥಾನ ನಿರ್ಮಾಣ ಸಮಿತಿಯ ಪ್ರಾ. ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment