ಎಡನೀರು ಮಠದ ಶ್ರೀ ಗಳಿಗೆ ಹೆಚ್ಚಿನ ಭದ್ರತೆ ನೀಡಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ: ಗುರುರಾಜ್ ಭಟ್ ಕೈರಂಗಳ

Coastal Bulletin
ಎಡನೀರು ಮಠದ ಶ್ರೀ ಗಳಿಗೆ ಹೆಚ್ಚಿನ ಭದ್ರತೆ ನೀಡಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ: ಗುರುರಾಜ್ ಭಟ್ ಕೈರಂಗಳ

ಬಂಟ್ವಾಳ :ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಮಹಾಸಂಸ್ಥಾನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರ ಕಾರಿನ ಮೇಲೆ ನಡೆದ ದಾಳಿ ನಡೆದಿರುವುದು ಖಂಡನೀಯ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಗುರುರಾಜ್ ಭಟ್ ಕೈರಂಗಳ ಹೇಳಿದ್ದಾರೆ.

ಪ್ರಸಿದ್ಧ ಶಂಕರಾಚಾರ್ಯ ಪರಂಪರೆ ಹಾಗೂ ದೀರ್ಘ ಇತಿಹಾಸ ಹೊಂದಿರುವ ಕಾಸರಗೋಡು ಜಿಲ್ಲೆಯ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ವಾಹನದಲ್ಲಿರುವ ಸಂದರ್ಭದಲ್ಲಿ ನಡೆದಿರುವ ದಾಳಿ ಅತ್ಯಂತ ಖಂಡನೀಯ.

ಯಕ್ಷಗಾನ ಕಲೆ ಸಾಹಿತ್ಯ ಸಾಮಾಜಿಕ ಚಟುವಟಿಕೆಗಳಿಗೆ

ಅಗತ್ಯ ಪ್ರಾಶಸ್ತ್ಯ ನೀಡಿ ಸಮಾಜಕ್ಕೋಸ್ಕರ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟಿರುವ ಸ್ವಾಮೀಜಿಯವರ ಮೇಲಿನ ದಾಳಿಯನ್ನು ಖಂಡಿಸುತ್ತಾ ಇದರ ಕುರಿತು ಉನ್ನತ ಮಟ್ಟದ ತನಿಖೆ ಮಾಡಬೇಕು ಹಾಗೂ ಸ್ವಾಮಿಗಳಿಗೆ ಮತ್ತು ಮಠಕ್ಕೆ ಹೆಚ್ಚಿನ ಭದ್ರತೆಯನ್ನು ಕೇರಳ ಸರಕಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Leave a Comment