ಬಂಟ್ವಾಳ :ದೀಪಾವಳಿಯ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ, ಮಂಗಳೂರು ಹಾಗೂ ನಂದಿಕೇಶ್ವರ ಯಕ್ಷ ಮಿತ್ರ ಬಳಗ ಶಂಕರನಾರಾಯಣ ಹೆಬ್ಬಾಡಿ ಇವರ ಕೂಡುವಿಕೆಯಲ್ಲಿ ಬಂಟ್ವಾಳ ತಾಲೂಕಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ತೆಂಕು ಹಾಗೂ ಬಡಗು ತಿಟ್ಟಿನ ಸುಪ್ರಸಿದ್ದ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಕಲಾ ಸೇವೆಯಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನವಂಬರ್ 12ರ ಆದಿತ್ಯವಾರ ರಾತ್ರಿ 9 ಗಂಟೆಗೆ ಸ್ಪರ್ಶ ಕಲಾ ಮಂದಿರ ಬಿ. ಸಿ ರೋಡಿನಲ್ಲಿ ನಡೆಯಲಿದೆ ಎಂದು ಮೇಳದ ವ್ಯವಸ್ಥಾಪಕರಾದ ಸಂತೋಷ್ ಶೆಟ್ಟಿ ಕಡ್ತಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














