Coastal Bulletin

ಬಂಟ್ವಾಳ : ದೀಪಾವಳಿಯ ಹಬ್ಬವನ್ನು ಮತ್ತೆ ನೆನಪಿಸುವಂತೆ ಅಂಗನವಾಡಿ ಶಾಲೆಯ ಸುತ್ತ ಮಾತೆಯರು ದೀಪ ಬೆಳಗಿಸಿ, ಬಲೂನ್‌ಗಳಿಂದ ಕಮಾನ್‌ನಂತೆ ನಿರ್ಮಾಣ ಮಾಡಿ, ವಿವಿಧ ಬಗೆಯಲ್ಲಿ ಅಲಂಕಾರ ಮಾಡಿದ ನಲ್ಕೆಮಾರ್ ಅಂಗನವಾಡಿ ಶಾಲೆಯ ಆರಂಭೋತ್ಸವ ಹಾಗೂ ಸಭಾಕಾರ್ಯಕ್ರಮವನ್ನು ಶಾಸಕರು, ತಹಶೀಲ್ದಾರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್ ಅಧ್ಯಕ್ಷರೂ ಹಾಗೂ ವಿವಿಧ ಅತಿಥಿ ಗಣ್ಯರ ಸಮ್ಮುಖದಲ್ಲಿ ಚಿಣ್ಣರಿಂದಲೇ ಉದ್ಘಾಟಿಸುವ ಮೂಲಕ ವಿಶಿಷ್ಠವಾಗಿ ಬಾಲವಿಕಾಸ ಸಮಿತಿ ನಲ್ಕೆಮಾರ್ ಅಂಗನವಾಡಿ ಶಾಲೆಯಲ್ಲಿ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಕ್‌ರವರು ಅಂಗನವಾಡಿಗೆ ಸೇರ್ಪಡೆಯಾದ ಮಕ್ಕಳ ಕೈಗೆ ಹೂಗಳನ್ನು ನೀಡಿ ಶಾಲಾ ಕೊಠಡಿಗೆ ಕಳುಹಿಸಿದರು. ಕೆಲಹೊತ್ತು ಚಿಣ್ಣರ ಜೊತೆ ಮಾತನಾಡಿ ನಂತರ ಸಭಾಕಾರ್ಯಕ್ರಮದಲ್ಲಿ ಮಾತನಾಡಿ ನಲ್ಕೆಮಾರ್ ಅಂಗನವಾಡಿ ಶಾಲೆಯ ಮಕ್ಕಳಿಗೆ ವಿದ್ಯೆಗೆ ಪೂರಕವಾದ ವಾತಾವರಣವಿದೆ. ಶಾಲಾ ಮೈದಾನವಿದೆ. ದೊಡ್ಡ ಮಕ್ಕಳೊಂದಿಗೆ ಬೆರೆಯಲು ಪ್ರಾಥಮಿಕ ಶಾಲೆಯು ಪಕ್ಕದಲ್ಲೆ ಇದೆ ಎಂದು ತಿಳಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆ ಶಿಕ್ಷಣದ ಆರಂಭ ಅಂಗನವಾಡಿ ಕೇಂದ್ರದಿಂದ ಶುರುವಾಗುತ್ತದೆ, ಶಿಕ್ಷಣದ ದೇಗುಲವಾಗಿರುವ ಅಂಗನವಾಡಿ ಕೇಂದ್ರ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಗಬೇಕು, ಅ ನಿಟ್ಟಿನಲ್ಲಿ ವ್ಯವಸ್ಥೆಗಳು

ಪ್ರತಿ ಮಗುವಿಗೆ ಸಿಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು

.ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ.ಎಸ್. ಆರ್.ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಉಪನಿರ್ದೇಶಕ ಪಾಪಬೋವಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪಂಚಾಯತ್ ಉಪಾಧ್ಯಕ್ಷ ಸುನಿಲ್ ಕಾಯರ್‌ಮಾರ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯಕುಮಾರ್, ಪಂಚಾಯತ್ ಸದಸ್ಯರಾದ ಭಾರತಿ ಚೌಟ, ಚಂದ್ರಾವತಿ, ಪ್ರಕಾಶ್, ಸೌಮ್ಯ, ಅಂಗನವಾಡಿ ಕಾರ್ಯಕರ್ತೆ ಭಾರತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ನಿಶಾಲತಾ ಹಾಗೂ ಸ್ತ್ರೀ ಶಕ್ತಿ ಸದಸ್ಯರು ಉಪಸ್ಥಿತರಿದ್ದರು. ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಸ್ವಾಗತಿಸಿ, ಮೇಲ್ವಿಚಾರಕಿ ಗುಣವತಿ ವಂದಿಸಿದರು.

Leave a Comment