ತುಂಬೆ :ಪದವಿ ಪೂರ್ವ ಕಾಲೇಜಿನಲ್ಲಿ ‘ಸುಮನ ಬಳಗ’ದ ಉದ್ಘಾಟನೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ. ಮನುಷ್ಯರಿಂದಲೇ ಪರಿಸರ ಪ್ರಕೃತಿ ಹಾಳಾಗುತ್ತಿದೆ: ದಿನೇಶ್ ಹೊಳ್ಳ

Coastal Bulletin
ತುಂಬೆ :ಪದವಿ ಪೂರ್ವ ಕಾಲೇಜಿನಲ್ಲಿ ‘ಸುಮನ ಬಳಗ’ದ ಉದ್ಘಾಟನೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ. ಮನುಷ್ಯರಿಂದಲೇ ಪರಿಸರ ಪ್ರಕೃತಿ ಹಾಳಾಗುತ್ತಿದೆ: ದಿನೇಶ್ ಹೊಳ್ಳ

ಬಂಟ್ವಾಳ :ಪರಿಸರ – ಪ್ರಕೃತಿ ಎನ್ನುವುದು ಸಹಜವಾಗಿ ಇದ್ದಾಗ ಮನುಷ್ಯರಾದ ನಾವು ಆರೋಗ್ಯ ಪೂರ್ಣವಾದ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯ. ಭೂಕುಸಿತಗಳು, ಮಳೆ- ಬೆಳೆಗಳ ಹೆಚ್ಚು ಕಡಿಮೆಯು ಮನುಷ್ಯನ ಕಾರಣದಿಂದಲೇ ಆಗುತ್ತಿದೆ. ಪ್ರಕೃತಿಯು ನಮಗಾಗಿ ಯಾವ ಕೇಡನ್ನು ಬಯಸುವುದಿಲ್ಲ. ಮನುಷ್ಯ ಮಾತ್ರರಾದ ನಾವು ಅದರ ವಿರುದ್ಧವಾಗಿ ವರ್ತಿಸುತ್ತಿದ್ದೇವೆ.

ಪಶ್ಚಿಮ ಘಟ್ಟವು ತನ್ನ ಉದ್ದಗಲಕ್ಕೆ ಸಹಜತೆಯನ್ನು ಉಳಿಸಬೇಕಾಗಿದೆ. ಆದರೆ ನದಿ ತಿರವು ಪ್ರಾಣಿ, ಪಕ್ಷಿಗಳ ಅಳಿವು, ಮಣ್ಣಿನ ಮಲಿನತೆಯೇ ಮುಂತಾದ ಕಾರಣಗಳಿಂದ ಕಾಡು ನಾಶ, ಪ್ರಾಣಿ ನಾಶ, ಪ್ರಕೃತಿಗೆ ಅಗತ್ಯವಾಗಿ ಬೇಕಾದ ಕ್ರಿಮಿ–ಕೀಟಗಳ ನಾಶ ಉಂಟಾಗುತ್ತಿದೆ. ಇವೆಲ್ಲದರ ಬಗ್ಗೆ ಧ್ವನಿ ಎತ್ತುವ ಗುಣ ಪ್ರತಿಯೊಬ್ಬರಲ್ಲಿ ಮೂಡಿ ಬರಬೇಕಾಗಿದೆ ಎಂಬುದಾಗಿ ಪರಿಸರ ಹೋರಾಟಗಾರರೂ ಕಲಾವಿದರೂ ಆದ ದಿನೇಶ್ ಹೊಳ್ಳ ಹೇಳಿದರು. ಅವರು ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟ ಅಗತ್ಯ–ಮಹತ್ವ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅವರು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ‘ಸುಮನ ಬಳಗ’ ಜೋಡುಮಾರ್ಗ ಇದರ ಉದ್ಘಾಟನೆ ಮಾಡಿ ಅದರ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.  

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮನ ಬಳಗದ ಕಾರ್ಯಕರ್ತೆ ಡಾI ನಾಗವೇಣಿ ಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿ ಸುಂದರ ಮನುಸು

ಸ್ವಚ್ಘ ಪರಿಸರ ಎಂಬ ಪರಿಕಲ್ವನೆಯಡಿಯಲ್ಲಿ ನಾಡಿನ ಯುವಜನತೆ ಪ್ರಕೃತಿ – ಪರಿಸರದ ಬಗ್ಗೆ ಮುಂದಕ್ಕೆ ವಿಶೇಷವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮದೊಂದಿಗೆ ಇತರ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.  

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಮಾತನಾಡಿ ಪರಿಸರ ರಕ್ಷಣೆ ಪ್ರತಿಯೊಬ್ಬನ ಹೊಣೆಯಾಗಿದ್ದು ಅದನ್ನು ಉಳಿಸುವಲ್ಲಿ ನಾವೆಲ್ಲರೂ ಜೊತೆಯಾಗಿ ಪಾಲ್ಗೊಳ್ಳೋಣ ಎಂದರು.  

ಸುಮನ ಬಳಗದ ಅನಿಲ್, ನ್ಯಾಯವಾದಿ ಶ್ರೀನಿವಾಸ ದೈಪಲ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಯೋಗೀಶ್ ಬೊಳ್ಳಾರಿ ಮತ್ತು ಶೇಖರ್ ಬೊಳ್ಳಾರಿ ಇವರ ನಿರ್ದೇಶನದಲ್ಲಿ ಖ್ಯಾತ ಕವಿ ನಿಸಾರ್‍ ಅಹ್ಮದ್‍ರ ನಿತ್ಯೋತ್ಸವ ಗೀತೆಯನ್ನು ಕಾಲೇಜು ವಿದ್ಯಾರ್ಥಿ/ನಿಯರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು. ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ವಂದಿಸಿ, ಸುಮನ ಬಳಗದ ಪದಾಧಿಕಾರಿ ಡಾI ವೀಣಾ ತೋಳ್ಪಾಡಿ ನಿರೂಪಿಸಿದರು.  

ಸಮಾರಂಭದ ಬಳಿಕ ಸುಮನ ಬಳಗದ ವತಿಯಿಂದ ನೀಡಲಾದ ಸುಮಾರು 30 ಗಿಡಗಳನ್ನು ಕಾಲೇಜು ಆವರಣದಲ್ಲಿ ನೆಡಲಾಯಿತು.

Leave a Comment