ಜಾತಿ ಸಮುದಾಯಗಳ ಬಗ್ಗೆ ಅವಹೇಳನ ಮಾಡಿದ ಅನಿತಾ ಕಾಸರಗೋಡು ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ:ಪ್ರಭಾಕರ ಪ್ರಭು

Coastal Bulletin
ಜಾತಿ ಸಮುದಾಯಗಳ ಬಗ್ಗೆ ಅವಹೇಳನ ಮಾಡಿದ ಅನಿತಾ ಕಾಸರಗೋಡು ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ:ಪ್ರಭಾಕರ ಪ್ರಭು

ಬಂಟ್ವಾಳ :ಕೇರಳ ರಾಜ್ಯದ ಕಾಸರಗೋಡು ನಿವಾಸಿ ಅನಿತಾ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಬಲ ಜಾತಿ ಸಮುದಾಯಗಳ ಬಗ್ಗೆ ಮನಬಂದಂತೆ ಹುಚ್ಚರ ರೀತಿಯಲ್ಲಿ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ಬಿಲ್ಲವ ಜಾತಿ ಹಾಗೂ ಬಂಟ ಜಾತಿಯ ಬಗ್ಗೆ ಕೆಟ್ಟ ಶಬ್ದಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ . ಆಕೆಯ ಬಳಿ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮತ್ತೆ ಮುಂದುವರಿದು ಯಾವುದೆ ಕಾನೂನು ,ನಿಯಮಗಳನ್ನು ಲೆಕ್ಕಿಸದೇ ಬಿಲ್ಲವ ಸಮುದಾಯದ ಬಗ್ಗೆ ಆವ್ಯಾಚ್ಚ ಪದಗಳಿಂದ ನಿಂದಿಸಿರುತ್ತಾರೆ  ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಬಂಟ್ವಾಳ ತಾ ಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಕರ್ನಾಟಕ ಸರಕಾರದ ಪೋಲಿಸ್ ಮಹಾನಿರ್ದೇಶಕರಿಗೆ ಹಾಗೂ ಪೋಲಿಸ್ ವರಿಷ್ಠಾಧಿಕಾರಿ, ದಕ್ಷಿಣಕನ್ನಡ ಇವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಒಂದು ಧರ್ಮದವರನ್ನು ಓಲೈಕೆ ಮಾಡಿಕೊಂಡು ಬಿಲ್ಲವ, ಬಂಟ್ಸ್ ಜಾತಿ ಸಮುದಾಯವನ್ನು ನಿಂದಿಸುವ ಈ ಹೆಂಗಸಿನ ಕುರಿತು ಸಾರ್ವಜನಿಕರಲ್ಲಿ ಅನುಮಾನ ಉಂಟಾಗಿದ್ದು ಇವರ ಬಗ್ಗೆ ಪೂರ್ವಪರ ತನಿಖೆಯಾಗಬೇಕು. ಯಾವುದೇ ಒಬ್ಬ ವ್ಯಕ್ತಿಯಿಂದ ತೊಂದರೆಗೆ ಒಳಗಾದರೆ ಆ ವ್ಯಕ್ತಿಯ ಬಗ್ಗೆ ವೈಯಕ್ತಿಕ ನಿಂದನೆ ಮಾಡಬೇಕೇ ಹೊರತು ವ್ಯಕ್ತಿಗೆ ಸಂಬಂಧಿಸಿದ ಸಮುದಾಯದ ಬಗ್ಗೆ ಅವಹೇಳನ ಮಾಡುವುದು ಕಾನೂನು ಅಪರಾಧ ಹಾಗೂ ಸಮಾಜದ್ರೋಹಿ ವಿಚಾರವಾಗಿದೆ

.ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಗೌರವ ಮತ್ತು ಸಂಪ್ರದಾಯಗಳಿರುವ ಈ ಕಾಲಘಟ್ಟದಲ್ಲಿ ಇಂತಹ ವ್ಯಕ್ತಿಗಳಿಂದ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಅವಹೇಳನ ಮಾಡುವುದು ಕಾನೂನು ಬಾಹಿರ ಕೃತ್ಯವಾಗಿದೆ.

ಈ ನಿಟ್ಟಿನಲ್ಲಿ ನೆರೆ ರಾಜ್ಯ ಕೇರಳ ಪೋಲಿಸ್ ಮಹಾನಿರ್ದೇಶಕರೊಂದಿಗೆ ಸಮನ್ವಯ ಮಾಡಿಕೊಂಡು ಈ ಸಮಾಜ ಘಾತುಕ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ವಹಿಸಬೇಕಾಗಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.


Leave a Comment