ಬಂಟ್ವಾಳ: ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವು ಜೂ.7ರಂದು ಭಾನುವಾರ ಪುಂಚಮೆ ಶ್ರೀ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನಡೆಯಿತು.
ಆಸರೆ ಸೇವಾ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ ಮಾತನಾಡಿ ಆಸರೆ ಸಂಸ್ಥೆಯು ಕಳೆದ ಏಳು ವರ್ಷದಿಂದ ನಿರಂತರವಾಗಿ ಜನರ ಸಮಸ್ಯಗಳಿಗೆ ಸ್ಪಂದಿಸುತ್ತಾ ಜನರೊಂದಿಗೆ ಬೆರೆತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬೇರೆ ಬೇರೆ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುತ್ತದೆ. ವಿದ್ಯಾವಂತರಾದರೆ ಸಾಲದು ಪರರಿಗೆ ಸ್ಪದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಂದಿನ ದಿನಗಳಲ್ಲಿ ಗ್ರಾಮದ ವಿದ್ಯಾರ್ಥಿ ಗಳಿಗಲ್ಲದೆ ಇತರ ಗ್ರಾಮದ ಶಾಲೆಗಳ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು
ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಪ್ರಗತಿ ಪರ ಕೃಷಿಕರಾದ ಶಂಕರ ಪುಜಾರಿ ಬಡಕಬೈಲ್,ಗುಂಡಿಕುಮೇರು ಮಸೀದಿ ಯ ಅದ್ಯಕ್ಷರಾದ ಉಸ್ಮಾನ್ ಕರಿಯಂಗಳ,ಪೊಳಲಿ ಪ್ರೌಢಶಾಲೆ ಯ ಮುಖ್ಯ ಶಿಕ್ಷಕರಾದ ಸುಬ್ರಾಯ ಪೈ ,ಶಿಕ್ಷಕಿ ರಂಜಿತ, ಸಾಮಾಜಿಕ ಕಾರ್ಯಕರ್ತರಾದ ಕಿಶೋರ್ ಪಲ್ಲಿಪಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸುರೇಂದ್ರ ಪರವ, ಉಮೇಶ್ ಆಚಾರ್ಯ ಕರಿಯಂಗಳ, ಆಸರೆ ಸೇವಾ ಫೌಂಡೇಶನ್ ನ ಪ್ರಮುಖರಾದ ಪ್ರಸಾದ್ ಗರೋಡಿ, ಆಸರೆ ಸೇವಾ ಫೌಂಡೇಶನ್ ಇದರ ಸರ್ವಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜು ಗರೋಡಿ ಸ್ವಾಗತಿಸಿ ಇಬ್ರಾಹಿಂ ನವಾಜ್ ಬಡಕಬೈಲು ನಿರೂಪಿಸಿದರು.















