Coastal Bulletin

ಮಂಗಳೂರು :ಭಾರತೀಯ ಜನತಾ ಪಾರ್ಟಿ ಎಸ್ ಸಿ ಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲ ಸನ್ಮಾನ್ಯ ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರಕಾರ 8ನೇ ವರ್ಷದ ಆಡಳಿದ ಸಂಭ್ರಮಾಚರಣೆಯ ಪ್ರಯುಕ್ತ ಸೇವೆ, ಸುಶಾಸನ,ಬಡವರ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಇ -ಶ್ರಮ ಕಾರ್ಡ್,ಆಯುಷ್ಮನ್ ಕಾರ್ಡ್, ಪಡಿತರ ಚೀಟಿ ನವೀಕರಣ ಕಾರ್ಯಕ್ರಮವು ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಎಸ್ ಸಿ ಮೋರ್ಚಾ ದಿಂದ ಬಾಬುಗುಡ್ಡೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವಿಜಯಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ವಿನಯನೇತ್ರ ದಡ್ಡಲ್ ಕಾಡ್  ಉದ್ಘಾಟಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಸಿ ಮೋರ್ಚಾದ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡೆ ವಹಿಸಿದ್ದರು.

ಮ ನ ಪಾ ಸದಸ್ಯರುಗಳಾದ ಶೈಲೇಶ್ ಶೆಟ್ಟಿ ಮತ್ತು ಭರತ್ ಕುಮಾರ್,ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರುಗಳಾದ ದೀಪಕ್ ಪೈ ಹಾಗೂ ರಮೇಶ್ ಹೆಗ್ಡೆ,ಕುದ್ಮಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ಶ್ಯಾಮ್ ಕರ್ಕೇರ,ಶ್ರೀ ಬಬ್ಬುಸ್ವಾಮಿ ಕ್ಷೇತ್ರ

ಶೆಟ್ಲ ಗ್ರಾಮ ಇದರ 2ನೇ ಗುರಿಕರರಾದ ಶಶಿಕಾಂತ್ ಬಿ ಎಸ್,ಶಕ್ತಿಕೇಂದ್ರದ ಪ್ರಮುಖರಾದ ಧರ್ಮೇಂದ್ರ,ಬೂತ್ ಅಧ್ಯಕ್ಷರಾದ ಜನಾರ್ಧನ್ , ಪ್ರಮುಖರಾದ ಲಲ್ಲೇಶ್ ಕುಮಾರ್, ಮೋಹನ್ ಪೂಜಾರಿ , ನಿಲೇಶ್ ಕಾಮತ್ , ಪ್ರಸನ್ನ ದಡ್ಡಲ್ ಕಾಡ್ , ರೂಪ , ಲಲಿತ  ಬಿಜೆಪಿ ಮಂಡಲದ ಪದಾಧಿಕಾರಿಗಳು, ಎಸ್ ಸಿ ಮೋರ್ಚಾ ಪದಾಧಿಕಾರಿಗಳು   ಸದಸ್ಯರು ,ಸ್ಥಳೀಯ ಬಿಜೆಪಿ ಕಾರ್ಯಕರ್ತರು,ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಸ್ ಸಿ ಮೋರ್ಚಾದ ಪ್ರಧಾನಕಾರ್ಯದರ್ಶಿಗಳಾದ  ಶ್ರೀ ಪ್ರಜ್ವಲ್ ಚಿಲಿಂಬಿ  ಸ್ವಾಗತಿಸಿ, ನಾಗೇಶ್ ಕೊಡಕ್ಕಲ್ ಧನ್ಯವಾದ ಸಮರ್ಪಿಸಿದರು.

Leave a Comment