ಶ್ರೀ ಗೋರಕ್ಷನಾಥ್ ಗದ್ದುಗೆಯ ಪೀಠಾಧೀಶ್ವರ,ನಾಥ ಪಂಥದ ಪರಮೋಚ್ಚ ಧರ್ಮಗುರು, ಹಿಂದೂ ಯುವ ವಾಹಿನಿಯ ಸಂಸ್ಥಾಪಕರು ಮತ್ತು ರಾಷ್ಟ್ರೀಯ ಸಂರಕ್ಷಕರು, ಅಪ್ಪಟ ರಾಷ್ಟ್ರವಾದಿ,ಉತ್ತರ ಪ್ರದೇಶದ ಅಭಿವೃದ್ಧಿಯ ಹರಿಕಾರ ಹಾಗೂ ಯಶಸ್ವೀ ಮುಖ್ಯಮಂತ್ರಿ ಹಿಂದೂ ಹ್ರದಯ್ ಸಾಮ್ರಾಟ್ ಮಹಾಂತ್ ಯೋಗಿ ಆದಿತ್ಯನಾಥ್ ಜಿ ಮಹಾರಾಜ್ ಅವರ ಅವತರಣ ದಿವಸದ ಅಂಗವಾಗಿ ಹಿಂದೂ ಯುವ ವಾಹಿನಿ ದಕ್ಷಿಣ ಕನ್ನಡ ಜಿಲ್ಲೆಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ಪೂಜೆ ಹಾಗೂ ವನಮಹೋತ್ಸವ,ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಜಿ ಮಹಾರಾಜ್ ಅವರ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ನಂತರ ಪೊಳಲಿಯ ಶ್ರೀ ರಾಮಕೃಷ್ಣ ತಪೋವನದಲ್ಲಿ ವನಮಹೋತ್ಸವ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಪೊಳಲಿ ಶ್ರೀ ರಾಮಕ್ರಷ್ಣ ತಪೋವನದ
ಶ್ರೀ ಶ್ರೀ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು, ಹಿಂದೂ ಯುವ ವಾಹಿನಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರು ಹಾಗೂ ಹಿಂದೂ ಜಾಗರಣ ವೇದಿಕೆಯ ಗಣೇಶ್ ಕೆದಿಲ, ಶಿವಪ್ರಸಾದ್ ಬಂಟ್ವಾಳ, ಹಿಂದೂ ಯುವ ವಾಹಿನಿ ಕರ್ನಾಟಕದ ರಾಜ್ಯ ಉಪಾಧ್ಯಕ್ಷರಾದ ಪದ್ಮನಾಭ ಪೂಜಾರಿಯವರು ಉಪಸ್ಥಿತರಿದ್ದರು













