ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ. ಜಾನಪದ ಅಮೂಲ್ಯ ಸಂಪತ್ತು, ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ : ಪಿ.ರಾಮ ಭಟ್

Coastal Bulletin
ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ. ಜಾನಪದ ಅಮೂಲ್ಯ ಸಂಪತ್ತು, ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ : ಪಿ.ರಾಮ ಭಟ್

ಬಂಟ್ವಾಳ: ಶರಾವತಿ ಬತ್ತಿದರೆ ಮತ್ತೆ ಬರುವಳು, ಆದರೆ ಜಾನಪದ ಶರಾವತಿ ಬತ್ತಿದರೆ ಮತ್ತೆ ಹುಟ್ಟಲಾರಲು ಆದ್ದರಿಂದ ಅಂತಹ ಅಮೂಲ್ಯ ಸಂಪತ್ತನ್ನು ಅಳಿಯಲು ಬಿಡದೆ ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆನುವಂಶಿಕ ಪ್ರಧಾನ ಅರ್ಚಕ ಪಿ.ರಾಮ ಭಟ್ ಹೇಳಿದರು. ಅವರು ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಎ.7ರಂದು ಆದಿತ್ಯವಾರ ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿ ಉದ್ಯಮಿ ರಘುನಾಥ ಸೋಮಯಾಜಿ ಮಾತನಾಡಿ ನಮ್ಮ ಊರಿನ ಬಂಟ್ವಾಳದಲ್ಲಿ ಜಾನಪದ ಪರಿಷತ್ತು ಅಸ್ತಿತ್ವಕ್ಕೆ ಬಂದದ್ದು ಸಂತೋಷದ ವಿಚಾರ, ಇದು ಗ್ರಾಮೀಣ ಮಟ್ಟಕ್ಕೆ ತಲುಪಿ ಪ್ರತಿಭೆಗಳನ್ನು ಬೆಳಕಿಗೆ ತರುವುದರೊಂದಿಗೆ ಸಮಾಜಕ್ಕೆ ಪ್ರೇರಣೆ ಸಿಗುವಂತ ಮಾದರಿ ಕಾರ್ಯಕ್ರಮಗಳು ಪರಿಷತ್ ಮೂಲಕ ನಡೆಯಲಿ ತನ್ನ ಸಂಪೂರ್ಣ ಸಹಕಾರ ಇದೆ ಎಂದು ಶುಭ ಹಾರೈಸಿದರು.

ತಾಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಮಾಣೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ,ಜಾನಪದ ಪರಿಷತ್ತಿನ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲಬೈಲ್, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ| ತುಕರಾಮ್ ಪೂಜಾರಿ, ಹಿರಿಯ ಯಕ್ಷಗಾನ ಕಲಾವಿದ

ಶಿವರಾಮ ಜೋಗಿ, ಸಾಹಿತಿ ಮಾಲತಿ ಶೆಟ್ಟಿ ಮಾಣೂರು,ಉಪಸ್ಥಿತರಿದ್ದರು.

ಪ್ರಮುಖರಾದ ತಾರಾನಾಥ ಕೊಟ್ಟಾರಿ ತೇವು, ದಾಮೋದರ ಮಾಸ್ಟರ್, ಮೋಹನದಾಸ ಕೊಟ್ಟಾರಿ, ಮಂದಾರ ರಾಜೇಶ್ ಭಟ್, ಪದ್ಮಶ್ರೀ ನಿಟ್ಟೋಡಿ, ಕೋಶಾಧಿಕಾರಿ ಬಬಿತ ಎಸ್.ಎಂ, ಜತೆ ಕಾರ್ಯದರ್ಶಿ ಲಕ್ಷ್ಮೀ ಯಶವಂತ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಪ್ರತಿಭಾ ಪಿ.ಶೆಟ್ಟಿ, ಕೃಷ್ಣ ಕುಲಾಲ್ ನರಿಕೊಂಬು,ಗೌರವ ಸಲಹೆಗಾರರಾದ ಸುಧಾಕರ ತುಂಬೆ, ಅನಿಲ್ ಪಂಡಿತ್, ಗೋಪಾಲ ಅಂಚನ್, ಸಂಚಾಲಕರಾದ ಮನೋಜ್ ಕನಪಾಡಿ, ಪ್ರಶಾಂತ್ ಕನಪಾಡಿ, ಸಂಘಟನ ಕಾರ್ಯದರ್ಶಿಗಳಾದ ಚಂದ್ರಹಾಸ ಕಡೆಗೋಳಿ, ರಾಜೇಶ್ ಆಚಾರ್ಯ, ದಿನೇಶ್ ಅಮೀನ್, ಸಾಂಸ್ಕೃತಿಕ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತಿತರರಿದ್ದರು.

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಪಂಬದ ಸಜೀಪ ಅವರನ್ನು ಸಮ್ಮಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ರಮೇಶ್ ಮೆಲ್ಕಾರ್ ಪ್ರಸ್ತಾವನೆಗೈದರು. ಗೌರವ ಸಲಹೆಗಾರ ಸದಾಶಿವ ಡಿ.ತುಂಬೆ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು.

Leave a Comment