ಬಂಟ್ವಾಳ :ತಾಲೂಕಿನ ಪುದು ಗ್ರಾಮದ ವೈದ್ಯನಾಥ ಕ್ರಿಕೆಟರ್ಸ್ ದೇವರಪಾಲು ಸುಜೀರು ಇದರ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಮಾ.07ರಂದು ಸುಜೀರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಭಂಡಾರಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಐತಪ್ಪ ಆಳ್ವ ಸುಜೀರುಗುತ್ತು, ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಅಶೋಕ್ ಶೆಟ್ಟಿ ಸುಜೀರುಗುತ್ತು, ರವೀಂದ್ರ ಕಂಬಳಿ ಸುಜೀರು ಬೀಡು, ರಜತ
ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕಿಶೋರ್ ಸುಜೀರು, ಅಧ್ಯಕ್ಷರು ರವೀಂದ್ರ ಕಲ್ಲಾಜೆ, ವೈದ್ಯನಾಥ ಕ್ರಿಕೆಟರ್ಸ್ ಅಧ್ಯಕ್ಷ ಸತೀಶ್ ಮೆಜಪೆ ಸಹಿತ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.













