ಬಿ ಸಿ ರೋಡ್ :ಇಂಚರ ಕಲಾವಿದರು ತುಂಬೆ ಕಲಾವಿದರ ಸ್ನೇಹ ಸಮ್ಮಿಲನ ಕಾರ್ಯಕ್ರಮ. ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಸಮಾಜಕ್ಕೆ ಪ್ರೇರಣೆ: ಚಂದ್ರ ಪ್ರಕಾಶ್ ಶೆಟ್ಟಿ.

Coastal Bulletin
ಬಿ ಸಿ ರೋಡ್ :ಇಂಚರ ಕಲಾವಿದರು ತುಂಬೆ ಕಲಾವಿದರ ಸ್ನೇಹ ಸಮ್ಮಿಲನ ಕಾರ್ಯಕ್ರಮ. ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಸಮಾಜಕ್ಕೆ ಪ್ರೇರಣೆ: ಚಂದ್ರ ಪ್ರಕಾಶ್ ಶೆಟ್ಟಿ.

ಬಂಟ್ವಾಳ :ಕಲಾಶ್ರೀ ಸದಾಶಿವ ಡಿ ತುಂಬೆ ಸಾರಥ್ಯದ ಇಂಚರ ಕಲಾವಿದರು ತುಂಬೆ ಇವರು ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶದ ಪ್ರಯುಕ್ತ ಅಭಿನಯಿಸಿದ "ಕಂಡನಿ ಬುಡೆದಿ" ಎಂಬ ನಾಟಕ ಯಶಸ್ವಿಯಾದ ಹಿನ್ನಲೆಯಲ್ಲಿ ನಾಟಕಕ್ಕೆ ಸಹಕರಿಸಿದ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ಮಹನೀಯರನ್ನು ಒಟ್ಟು ಸೇರಿಸಿ ಗೌರವಿಸುವ "ಸ್ನೇಹ ಸಮ್ಮಿಲನ" ಎಂಬ ವಿಶಿಷ್ಟ ಕಾರ್ಯಕ್ರಮವು ಬಿ ಸಿ ರೋಡ್ ನ ಲಯನ್ಸ್ ಕ್ಲಬ್ ನಲ್ಲಿ ಮಾ 7ರಂದು ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಸಂಘಟಿಸಿದ ತಂಡದ ಮುಖ್ಯಸ್ಥ ಕಲಾ ಪೋಷಕ ಸದಾಶಿವ ಡಿ ತುಂಬೆ ಪ್ರಸ್ತಾವಿಕವಾಗಿ ಮಾತನಾಡಿ ನಾಟಕದ ಯಶಸ್ವಿಗೆ ಕಾರಣಕರ್ತರಾದವರನ್ನು ಗೌರವಿಸುವುದು ನನ್ನ ಕರ್ತವ್ಯ, ತನ್ನ ಆದಾಯದ ಸ್ವಲ ಭಾಗವನ್ನು ಸಮಾಜಕ್ಕೆ ಅರ್ಪಿಸಿ ಜೀವನದಲ್ಲಿ ತೃಪ್ತಿ ಹೊಂದಿದ್ದೇನೆ ಎಂದರು.


ಮುಖ್ಯ ಅತಿಥಿ ಮಾಜಿ ಜಿ ಪಂ ಸದಸ್ಯ ಚಂದ್ರ ಪ್ರಕಾಶ ಶೆಟ್ಟಿ ಮಾತನಾಡಿ, ಕಲಾವಿದರನ್ನು ಒಟ್ಟು ಸೇರಿಸಿ ಗುರುತಿಸಿ ಗೌರವಿಸುವುದು ಸಮಾಜಕ್ಕೆ ಪ್ರೇರಣೆ, ಇತರರಿಗೆ ಮಾದರಿಯಾದ ಕಾರ್ಯ, ಸದಾಶಿವ ಡಿ ತುಂಬೆ ಯಾವುದೇ ಸ್ವಾರ್ಥವಿಲ್ಲದೆ ಕಲಾಪೋಷಣೆ ಮಾಡುತ್ತ ಬರುತಿದ್ದಾರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಬಿ ಸಿ ರೋಡ್ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಅರುಣ್

ರೋಶನ್ ಡಿ ಸೋಜಾ, ರಂಗ ನಿರ್ದೇಶಕ ರತ್ನದೇವು ಪೂಂಜಲಕಟ್ಟೆ, ಸಾಮಾಜಿಕ ಕಾರ್ಯಕರ್ತ ಉಮೇಶ್ ನಿರ್ಮಲ್, ಹಿರಿಯರಾದ ಗಂಗಾಧರ ಅಮೀನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆ ಚಂದ್ರಹಾಸ ಕಡೆಗೋಳಿ ಯವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು, ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಾಯಿತು.

ಪ್ರಮುಖರಾದ ಉಮೇಶ್ ಸುವರ್ಣ ತುಂಬೆ, ಪ್ರಕಾಶ ಶೆಟ್ಟಿ ಶ್ರೀ ಶೈಲಾ,ಗಣೇಶ್ ಸಾಲಿಯಾನ್ ತುಂಬೆ, ರಮೇಶ ತುಂಬೆ, ರಾಮಚಂದ್ರ ಸುವರ್ಣ, ಗೋಪಾಲಕೃಷ್ಣ ಸುವರ್ಣ, ಪ್ರವೀಣ್ ಬಿ ತುಂಬೆ, ದಿನೇಶ್ ಅಮೀನ್,ಶುಭಾಷ್ ರೈ,ಸುಧಾಕರ್ ತುಂಬೆ,ನಿತಿನ್ ತುಂಬೆ,ರಮೇಶ್ ಮೆಲ್ಕಾರ್,ಸಾಯಿರಾಂ ನಾಯಕ್,ಅಕ್ಬರ್ ಆಲಿ,ರಮೇಶ್ ಚಿತ್ರ,ರಾಘವ ಬಂಗೇರ,ದಿನೇಶ್ ತುಂಬೆ,ದೇವದಾಸ್ ಪರ್ಲಕ್ಕೆ,ಶೇಖರ್ ಬಿ ಅಂಚನ್,ಜಗದೀಶ್ ಗಟ್ಟಿ,ಕೇಶವ ಗಟ್ಟಿ,ಅನಂತ್ ವಿಜಯ್,ದಿವಾಕರ್ ಪೆರ್ಲಬೈಲ್, ಮನೋಜ್ ಕನಪಾಡಿ,ಪತ್ರಿಕಾ ಮಾಧ್ಯಮದ ಗಣ್ಯರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Leave a Comment