ಬಂಟ್ವಾಳ: ಬಿರುವೆರ್ ಕುಡ್ಲ ಇದರ ಬಂಟ್ವಾಳ ಘಟಕದ ಆಶ್ರಯದಲ್ಲಿ ಕಿನ್ನಿ ಪಿಲಿ ವೀಡಿಯೋ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಐದು ವರ್ಷದ ಒಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ನರ್ತನ ಹಾಗೂ ಬಣ್ಣದ ವೇಷಕ್ಕೆ ಆದ್ಯತೆ ನೀಡಲಾಗಿದೆ. ಗರಿಷ್ಠ ಒಂದು ನಿಮಿಷದ ವಿಡಿಯೋ ತುಣಕನ್ನು ರಚಿಸಿ 7899507611ವಾಟ್ಸಫ್ ಸಂಖ್ಯೆಗೆ ಕಳುಹಿಸುವಂತೆ ಕೋರಲಾಗಿದೆ.
ಸ್ಪರ್ಧಾಳುಗಳು ವಿಡಿಯೋದ ಜೊತೆಗೆ ಜನನ ಪ್ರಮಾಣಪತ್ರವನ್ನು ಅ.೧೫ರ ಒಳಗಾಗಿ ಕಳುಹಿಸಬೇಕು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ, ಹಾಗೂ ವಿಜೇತರ ಹೆಸರು
ಘೋಷಣೆಯಾಗುವ ಮುನ್ನ ಯಾವುದೇ ಸ್ಪರ್ಧೆಯ ವಿಡಿಯೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹರಿಯ ಬಿಡುವಂತಿಲ್ಲ, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ಹೆಚ್ಚಿನ ಮಾಹಿತಿಗಾಗಿ 9008883737ಅಥವಾ8105488273 ಯನ್ನು ಸಂಪರ್ಕಿಸ ಬಹುದಾಗಿದೆ.















