Coastal Bulletin

ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಜೀಪಮೂಡ ಇದರ ಸಿದ್ದಕಟ್ಟೆ ಶಾಖೆಯಲ್ಲಿ ಇ ಸ್ಟ್ಯಾಂಪಿಂಗ್ ಬಿಡುಗಡೆ ಸಮಾರಂಭ ಅ.೯ ರಂದು ಶನಿವಾರ ಬೆಳಿಗ್ಗ ೯.೩೦ಕ್ಕೆ ಸಿದ್ದಕಟ್ಟೆಯ ಪ್ರಶಸ್ತಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಶಾಖಾ ಕಚೇರಿಯಲ್ಲಿ ನಡೆಯಲಿದೆ.

ನ್ಯಾಯವಾದಿ ಸುರೇಶ್ ಶೆಟ್ಟಿ ಇ ಸ್ಟ್ಯಾಂಪಿಂಗ್ ಬಿಡುಗಡೆಗೊಳಿಸುವರು, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಳಕ್ಕೆ ಅಧ್ಯಕ್ಷತೆ ವಹಿಸುವರು. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ , ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೆಶಕರಾದ ರಮೇಶ್

ಅನ್ನಪ್ಪಾಡಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಲೆ, ಅಶೋಕ್ ಕುಮಾರ್ ಕೋಮಾಲಿ, ಕೆ. ಸುಜಾತ ಎಂ., ವಾಣಿ ವಸಂತ, ವಿಠಲ ಬೆಳ್ಚಾಡ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ., ಲೆಕ್ಕಿಗ ಪವಿತ್ರ, ಶಾಖಾ ವ್ಯವಸ್ಥಾಪಕಿ ಅಕ್ಷಿತಾ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.


Leave a Comment