ಬಂಟ್ವಾಳ: ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿ ಬಂಟ್ವಾಳಕ್ಕೆ ಭೇಟಿ ನೀಡಿದ ಶತಮಾನೋತ್ಸವ ಕಾರ್ಯಕ್ರಮ ಇಲ್ಲಿನ ಬೈಪಾಸ್ ನಿತ್ಯಾನಂದ ನಗರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಮಂದಿರದಲ್ಲಿ ಭಾನುವಾರ ನಡೆಯಿತು.
ಇದೇ ವೇಳೆ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರು 'ನಿತ್ಯಾನಂದರ ಸ್ಮರಣೆ ಮತ್ತು ಪ್ರೇರಣೆ' ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಳೆದ 100 ವರ್ಷಗಳ ಹಿಂದೆ ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿ ಬಂಟ್ವಾಳಕ್ಕೆ ಭೇಟಿ ನೀಡಿದ್ದ ವೇಳೆ ನಏತ್ರಾವತಿ ನದಿ ಉಕ್ಕಿ ಹರಿದು ಪೇಟೆ ಮುಳುಗಡೆಯಾದಾಗ ಭಕ್ತರ ಬೇಡಿಕೆಯಂತೆ ನೆರೆ ಇಳಿಸಿ ಹರಸಿ ಕಣ್ಮರೆಯಾದ ಪವಾಡ ಇಂದಿಗೂ ಅಚ್ಚಳಿಯದೆ ಭಕ್ತರಲ್ಲಿ ಉಳಿದಿದೆ ಎಂದರು.
ಆಡಳಿತ ಮಂಡಳಿ
ಅಧ್ಯಕ್ಷ ಬಿ. ಅಧ್ಯಕ್ಷ ದಿನೇಶ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷಿ ಪ್ರವೀಣ್ ಮತ್ತಿತರರು ಇದ್ದರು. ದಿನವಿಡೀ ಭಜನೆ ಸಹಿತ ಭಕ್ತರು ಸ್ವತಃ ಸ್ವಾಮೀಜಿದ್ವಯರ ಪಂಚಲೋಹ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.
ಟ್ರಸ್ಟಿ ಸುರೇಶ್ ಕುಲಾಲ್, ಸುಕುಮಾರ್, ಹರೀಶ್ ಎಂ., ದೇವಕಿ, ಪ್ರದೀಪ್ ಗಾಣಿಗ, ಅಶೋಕ್ ಕುಲಾಲ್, ಬೇಬಿ ಪೂಜಾರಿ, ದಿನೇಶ್ ಕೆ., ಹರೀಶ್ ಶೆಟ್ಟಿ, ಗೋಪಾಲ ಭಂಡಾರಿಬೆಟ್ಟು, ಯಶವಂತ ಮತ್ತಿತರರು ಇದ್ದರು. ಟ್ರಸ್ಟಿ ಚೆನ್ನಕೇಶವ ಸ್ವಾಗತಿಸಿ, ವಂದಿಸಿದರು.
--















