Coastal Bulletin

ಮುಂಬೈ ಉದ್ಯಮಿ ಸುನಿಲ್ ಆರ್ ಸಾಲ್ಯಾನ್ ಹಾಗೂ ಅವರ ಧರ್ಮ ಪತ್ನಿ ದೇವಕಿ ಸುನೀಲ್ ಸಾಲ್ಯಾನ್ ರವರು ಸುನೀಲ್ ರವರ ತಾಯಿ ದಿ! ಸುಮಿತ್ರಾ ಆರ್ ಸಾಲ್ಯಾನ್ ರವರ 75ನೇ ಜನ್ಮ ದಿನದ ಪ್ರಯುಕ್ತ ದೇರಳಕಟ್ಟೆ ಯ ಸೇವಾಶ್ರಮದ ಆಶ್ರಮವಾಸಿಗಳನ್ನು ಆಶ್ರಮದ ಪೋಷಕರ ಜೊತೆಗೆ ಮಂಗಳೂರು ನಗರದ ಪ್ರತಿಷ್ಠಿತ ದೇವಸ್ಥಾನಗಳ ದರ್ಶನ ಮಾಡಿಸಿ ವಿಭಿನ್ನ ರೀತಿಯ ಸೇವೆ ಮಾಡುವ ಮೂಲಕ ವೃಧ್ಧ ಮಾತೆಯರ ಆಶೀರ್ವಾದಕ್ಕೆ ಪಾತ್ರರಾದರು.

 ಈ ಮಾತೆಯರು ದೇವರ ದರ್ಶನವನ್ನು ಪಡೆಯುವಾಗ ಇವರಲ್ಲಿರುವ ಶ್ರದ್ಧಾ ಭಕ್ತಿಗೆ ಮೆಚ್ಚಲೇಬೇಕು. ಕ್ಷೇತ್ರದರ್ಶನ ಗಳಿಂದ ಸಂತಸಗೊಂಡು ಆನಂದ ಬಾಷ್ಪ ಒರೆಸಿಕೊಂಡು ನಮ್ಮನ್ನು ಅಪ್ಪಿಕೊಳ್ಳುವ ಭಾವುಕ ಸನ್ನಿವೇಶದಲ್ಲಿ ನಮ್ಮನ್ನೆಲ್ಲ ಅರಸಿದ ಅವರ ಪರಿಯನ್ನು ಕಂಡಾಗ ನಮ್ಮೆಲ್ಲರ ಕಣ್ಣಲಿ ಗಳು ಮಂಜಾದವು. ನಂತರ ಆಶ್ರಮದಲ್ಲಿ ಭೋಜನದ ವ್ಯವಸ್ಥೆ ಹಾಗೂ ಹಲವು ಮನೋರಂಜನ ಆಟಗಳನ್ನು ಅವರಲ್ಲಿ ಹಾಡಿಸಿ

ಬಹುಮಾನಗಳನ್ನು ಹಂಚಿದಾಗ ಇವರೆಲ್ಲ ಸಂತೋಷ ಪಟ್ಟರು .ಈ ರೀತಿ ಒಂದು ದಿನ ಅವರೊಟ್ಟಿಗೆ ಸಂತೋಷವಾಗಿ ಸಮಯ ಕಳೆದು ಆಶ್ರಮವಾಸಿಗಳ ಖುಷಿಗೆ ಪಾತ್ರರಾದೆವು ಎಂದು ಉದ್ಯಮಿ ಸುನಿಲ್ ಆರ್ ಸಾಲ್ಯಾನ್ ಹೇಳಿದರು.

ಈ ಸಂದರ್ಭದಲ್ಲಿ ಆಶೋಕ್ ಕುಲಾಲ್ ಕೂಳೂರು, ಜಯ ಅಂಚನ್, ಮಾಲತಿ ಜಯ ಅಂಚನ್ ,ಹೆಚ್ .ಕೆ ನಯನಾಡು ,ಜಯಂತ್ ನಯನಾಡು , ನಾರಾಯಣ್ ಸಿ.ಪೆರ್ನೆ ಜೊತೆಗಿದ್ದರು.

Leave a Comment