ಪ್ರಿಯ ಓದುಗರೇ, ಸಾಮಾಜಿಕ ಬದ್ಧತೆಯೊಂದಿಗೆ ಸಮಾಜಕ್ಕೆ ಪ್ರೇರಣೆ ಸಿಗುವಂತಹ ಹೊಸತನದ ಸುದ್ದಿಯನ್ನು ಕೊಡಬೇಕೆಂಬ ತುಡಿತದಿಂದ ಸಮಾನ ಮನಸ್ಕರ ತಂಡವು ಕಳೆದ ಜೂನ್ ನಲ್ಲಿ ಪ್ರಾರಂಭಿಸಿದ "ಕೋಸ್ಟಲ್ ಬುಲೆಟಿನ್"ಎಂಬ ವೆಬ್ ನ್ಯೂಸ್ ಮಾಧ್ಯಮವು ಇಂದಿಗೆ ಒಂದು ವರುಷ ಪೊರೈಸಿರುವುದು ಸಂತಸದ ವಿಚಾರ.
ಅವಸರದ,ಅತಿರಂಜಿತ ಸುದ್ದಿಯನ್ನು ಕೊಡದೆ ವಿಶ್ವಾಸಾರ್ಹವಾದ ಸುದ್ದಿಯು ಖಚಿತಗೊಂಡ ಬಳಿಕ ವಿಶ್ವದಾದ್ಯಂತ ಇರುವ ಕರಾವಳಿ ಕನ್ನಡಿಗರಿಗೆ ತಲುಪಿಸುವುದರ ಜೊತೆಗೆ, ಆರೋಗ್ಯ, ಶಿಕ್ಷಣ, ಕೃಷಿ, ಮಾರುಕಟ್ಟೆ ಧಾರಣೆ, ಕ್ರೀಡಾಸುದ್ದಿ, ರಾಶಿ ಭವಿಷ್ಯ ಮುಂತಾದ ಕ್ಷೇತ್ರಗಳ ಮಾಹಿತಿಗಳನ್ನು "ಕೋಸ್ಟಲ್ ಬುಲೆಟಿನ್" ವೆಬ್ ಪತ್ರಿಕೆ ಒದಗಿಸುತ್ತಿದೆ.
ಅಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ, ಯುವ ಪ್ರತಿಭೆಗಳ ತಮ್ಮ ಸ್ವಂತ ಬರಹದ ಕಥೆ, ಕವನ, ಕವಿತೆ, ಲೇಖನಗಳನ್ನು ವೆಬ್ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಅವರಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ.
ಓದುಗರು
ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತುಂಬು ಪ್ರೋತ್ಸಾಹ ಕೊಡುತ್ತಿದ್ದು ಈ ವರ್ಷದಲ್ಲಿ ಸುಮಾರು 2500ಕ್ಕೂ ಅಧಿಕ ಸುದ್ದಿಯನ್ನು ಜಾಲ ತಾಣದಲ್ಲಿ ಪ್ರಕಟಿಸಿದ್ದು ವಾರಕ್ಕೆ16 ಸಾವಿರಕ್ಕೂ ಅಧಿಕ ಓದುಗರನ್ನು ಸೃಷ್ಟಿಸಿದ್ದು "ಕೋಸ್ಟಲ್ ಬುಲೆಟಿನ್" ವೆಬ್ ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿ.
ಓದುಗರ, ಜಾಹಿರಾತುದಾರರ, ಹಿತೈಷಿಗಳ ನಿರಂತರ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೊಸತನದಿಂದ ಕೂಡಿದ ವೆಬ್ ಪತ್ರಿಕೆ ಹೊರ ಬರಲು ನಿಮ್ಮ ಆಶೀರ್ವಾದ, ಪ್ರೀತಿ, ಸಲಹೆ, ಸಹಕಾರ ಮುಂದಿನ ದಿನಗಳಲ್ಲಿಯೂ ಹೀಗೆ ಸದಾ ಇರಲಿ ಎಂದು ಬಯಸುತ್ತಿದ್ದೇವೆ.
ಧನ್ಯವಾದಗಳೊಂದಿಗೆ,
"ಟೀಮ್ ಕೋಸ್ಟಲ್ ಬುಲೆಟಿನ್"













