ನಾಣ್ಯ : ಮೇ 12, ಕುಲಾಲ ಸುಧಾರಕ ಸಂಘ (ರಿ)ಇದರ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ. ಕ್ರೀಡಾಕೂಟ,ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿದ್ಯಾ ಪ್ರೋತ್ಸಾಹಧನ ವಿತರಣೆ.

Coastal Bulletin
ನಾಣ್ಯ : ಮೇ 12, ಕುಲಾಲ ಸುಧಾರಕ ಸಂಘ (ರಿ)ಇದರ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ. ಕ್ರೀಡಾಕೂಟ,ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿದ್ಯಾ ಪ್ರೋತ್ಸಾಹಧನ ವಿತರಣೆ.

ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ,ನಾಣ್ಯ, ಮಾರಿಪಳ್ಳ,ಇದರ 31ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವವು ಮೇ 12 ಆದಿತ್ಯವಾರ ಕುಲಾಲ ಸಮುದಾಯ ಭವನ ನಾಣ್ಯ ದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ ಗಂಟೆ 8.00ಕ್ಕೆಗಣಹೋಮ 9.00ರಿಂದ ವಾರ್ಷಿಕ ಮಹಾಸಭೆ,10.00ರಿಂದ ವಾರ್ಷಿಕ ಕ್ರೀಡಾಕೂಟ (ಶ್ರೀ ನಾಗರತ್ತೇಶ್ವರೀ ಕ್ಷೇತ್ರದ ಆವರಣ)ನಡೆಯಲಿದ್ದು ಹೊನ್ನಪ್ಪ ಬಂಗೇರ ಗಂಪದಕೋಡಿ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ ಗಂಟೆ 100ರಿಂದ ಸಹಭೋಜನ 2.30ರಿಂದ ಸಂಗೀತ ಸ್ಪರ್ಧೆ,ಸಂಜೆ ಗಂಟೆ 4.0೦ರಿಂದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಬಿ. ನಾರಾಯಣ, ಅಧ್ಯಕ್ಷರು ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ, ಮಯೂರ್ ಉಲ್ಟಾಲ್, ಅಧ್ಯಕ್ಷರು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ

(ರಿ.) ಮಂಗಳೂರು. ರಾಧಾಕೃಷ್ಣ ಬಂಟ್ವಾಳ, ಅಧ್ಯಕ್ಷರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ.) ಪೊಸಳ್ಳಿ, ಬಿ.ಸಿ.ರೋಡ್, ಡಾ. ಸ್ವಾತಿ ಪಿ.ಟಿ., ಅಸಿಸ್ಟೆಂಟ್ ಪ್ರೊಫೆಸರ್, ಅರ್ಧೋಪೆಡಿಕ್ ಮತ್ತು ಸ್ಪೋರ್ಟ್ಸ್ ಫಿಸಿಯೋಥೆರಫಿ, ಯೆನೆಪೋಯ ಯುನಿವರ್ಸಿಟಿ ಮಂಗಳೂರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾಪ್ರೋತ್ಸಾಹಧನ ವಿತರಣೆ ನಡೆಯಲಿದೆ.ಸಂಜೆ ಗಂಟೆ 6.00 ರಿಂದ ಕುಲಾಲ ಮಹಿಳಾ ಘಟಕದ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರ.ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment